

ಸಿಡ್ನಿ: ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಅಬ್ಬರಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡ ಭಾರತಕ್ಕೆ 390 ರನ್ಗಳ ಬೃಹತ್ ಗುರಿ ನೀಡಿದೆ.
ಸಿಡ್ನಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸಿಸ್ ಪಡೆ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 389 ರನ್ ಕಲೆಹಾಕಿದೆ.
ತಂಡದ ಪರ ಡೇವಿಡ್ ವಾರ್ನರ್ (83), ನಾಯಕ ಆ್ಯರೂನ್ ಫಿಂಚ್ (60) ಉತ್ತಮ ಆರಂಭ ಒದಗಿಸಿದರೆ, ಸ್ಟೀವ್ ಸ್ಮಿತ್ (104), ಮಾರ್ನಸ್ ಲಬುಶೇನ್ (70) ಮತ್ತು ಗ್ಲೇನ್ ಮ್ಯಾಕ್ಸ್ವೆಲ್ (60*) ಅತ್ಯುತ್ತಮ ಆಟದ ಮೂಲಕ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು. ಉಳಿದಂತೆ ಮೊಯಿಸಸ್ ಹೆನ್ರಿಕ್ಸ್ 2 ರನ್ ಗಳಿಸಿ ಅಜೇಯರಾಗಿ ಉಳಿದರು.
ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ, ಜಸ್ಪ್ರಿತ್ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು. ಆದರೆ, ಯಾರೋಬ್ಬರು ಆಸಿಸ್ ಪಡೆಯ ರನ್ ವೇಗಕ್ಕೆ ಕಡಿವಾಣ ಹಾಕಲಿಲ್ಲ. (ಏಜೆನ್ಸೀಸ್)