

ಸಿಡ್ನಿ: ಕರೊನಾ ಕಾಲದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಭಾರತಕ್ಕೆ ಆತಿಥೇಯ ಆಸ್ಟ್ರೇಲಿಯಾ ತಂಡ ಭಾರಿ ಸವಾಲು ನೀಡಿದೆ. ಸಿಡ್ನಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಉಭಯ ತಂಡಗಳ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಆಸಿಸ್ ಪಡೆ ಭಾರತಕ್ಕೆ 375 ರನ್ಗಳ ಬೃಹತ್ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸಿಸ್ ಪಡೆ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್ ಕಲೆಹಾಕಿದೆ. ತಂಡಕ್ಕೆ ಡೇವಿಡ್ ವಾರ್ನರ್ (69), ನಾಯಕ ಆ್ಯರೂನ್ ಫಿಂಚ್ (114) ಉತ್ತಮ ಆರಂಭ ಒದಗಿಸಿದರೆ, ಸ್ಟೀವ್ ಸ್ಮಿತ್ (105) ಮತ್ತು ಗ್ಲೇನ್ ಮ್ಯಾಕ್ಸ್ವೆಲ್ (45) ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು.
ಉಳಿದಂತೆ ಮಾರ್ಕಸ್ ಸ್ಟೋಯಿನಿಸ್ (0), ಮಾರ್ನಸ್ ಲಬುಶೇನ್ (2), ಅಲೆಕ್ಸ್ ಕ್ಯಾರಿ (17*) ಮತ್ತು ಪ್ಯಾಟ್ ಕ್ಯೂಮಿನ್ (1*) ರನ್ ಕಲೆಹಾಕಿದರು.
ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದರೆ, ಜಸ್ಪ್ರಿತ್ ಬೂಮ್ರಾ, ನವದೀಪ್ ಸೈನಿ ಮತ್ತು ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಗಳಿಸಿದರು. ಆದರೆ, ಯಾರೋಬ್ಬರು ಆಸಿಸ್ ಪಡೆಯ ರನ್ ವೇಗಕ್ಕೆ ಕಡಿವಾಣ ಹಾಕಲಿಲ್ಲ. (ಏಜೆನ್ಸೀಸ್)