ಡಬ್ಲ್ಯುಬಿಬಿಎಲ್‌ನಿಂದ ಹಿಂದೆಸರಿದ ಸ್ಮತಿ ಮಂಧನಾ

smi mad
Published on

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮತಿ ಮಂಧನಾ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮಹಿಳೆಯರ ಬಿಗ್ ಬಾಷ್‌ಲೀಗ್‌ನಿಂದ(ಡಬ್ಲ್ಯುಬಿಬಿಎಲ್) ಹಿಂದೆ ಸರಿದಿದ್ದಾರೆ. ಸೆಪ್ಟೆಂಬರ್ 3 ರಂದು ನಡೆಯಲಿರುವ ಆಟಗಾರರ ಡ್ರ್‌ಟಾನಲ್ಲಿ ಹೆಸರು ನೋಂದಾಯಿಸದ ಸ್ಮತಿ ಸತತ ಎರಡನೇ ವರ್ಷ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.

ಕಳೆದ ಬಾರಿಯ ಡಬ್ಲ್ಯುಬಿಬಿಎಲ್‌ನಿಂದಲೂ ಹೊರಗುಳಿದಿದ್ದ ಮಂಧನಾ, ಮುಂಬರುವ ದೇಶೀಯ ಋತುವಿನ ಮೇಲೆ ಗಮನಹರಿಸಲು ನಿರ್ಧರಿಸಿದ್ದಾರೆ. ಅಕ್ಟೋಬರ್ 19 ರಿಂದ ಜನವರಿ 26 ರವರೆಗೆ ನಡೆಯಲಿರುವ ದೇಶೀಯ ಋತುವಿನಲ್ಲಿ ಮಂಧಾನಾ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಲಿದ್ದಾರೆ. ಅದಕ್ಕೂ ಮುನ್ನ ಹಾಂಗ್‌ಝೌ ಏಷ್ಯನ್ ಗೇಮ್ಸ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಮುಕ್ತಾಯಗೊಂಡ ದಿ ಹಂಡ್ರೆಡ್ ಟೂರ್ನಿಯ ಚಾಂಪಿಯನ್ ಸದರ್ನ್ ಬ್ರೇವ್ ತಂಡದ ಭಾಗವಾಗಿದ್ದರು. ನಾಯಕಿ ಹರ್ಮಾನ್‌ಪ್ರೀತ್ ಕೌರ್, ಹರ್ಲೀನ್ ಡಿಯೋಲ್, ರಿಚಾ ೋಷ್, ಮನ್ನತ್ ಕಶ್ಯಪ್, ಅಮನ್‌ಜೋತ್ ಕೌರ್, ವೇದಾಕೃಷ್ಣ ಮೂರ್ತಿ, ಶ್ರೇಯಾಂಕ ಪಾಟೀಲ್ ಹಾಗೂ ದೀಪ್ತಿ ಶರ್ಮ ಸೇರಿ 18 ಆಟಗಾರರು ಡ್ರ್‌ಟಾನಲ್ಲಿ ಹೆಸರು ನೋಂದಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net