

ಬೆಂಗಳೂರು: ಕರ್ನಾಟಕ ಅನೀಶ್ವರ್ ಗೌತಮ್, ಮುಂದಿನ ವರ್ಷದ ಜನವರಿ 14 ರಿಂದ ಫೆಬ್ರವರಿ 5 ರವರೆಗೆ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 19 ವಯೋಮಿತಿ ವಿಶ್ವಕಪ್ ಟೂರ್ನಿಗೆ 17 ಸದಸ್ಯರ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಕಿರಿಯರ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡಿಗನಾಗಿದ್ದಾರೆ. ದೆಹಲಿಯ ಯಶ್ ಧುಲ್ ತಂಡದ ನಾಯಕನಾಗಿದ್ದರೆ, ಆಂಧ್ರದ ಎಸ್‌ಕೆ ರಶೀದ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. 17 ಆಟಗಾರರು ಹಾಗೂ ಐವರು ಮೀಸಲು ಆಟಗಾರರನ್ನು ಆಯ್ಕೆಮಾಡಲಾಗಿದೆ. ಜನವರಿ 15 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಅಭಿಯಾನ ಆರಂಭಿಸಲಿದ್ದು, ಜ.19 ರಂದು ಐರ್ಲೆಂಡ್, ಜ.22 ರಂದು ಉಗಾಂಡ ತಂಡವನ್ನು ಎದುರಿಸಲಿದೆ.
ಭಾರತ ತಂಡ: ಯಶ್ ಧುಲ್ (ನಾಯಕ), ಎಸ್‌ಕೆ ರಶೀದ್ (ಉಪನಾಯಕ), ಹರ್ನೂರ್ ಸಿಂಗ್, ನಿಶಾಂತ್ ಸಿಧು, ಸಿದ್ದಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾಬಾ (ವಿಕೀ), ಅರಾಧ್ಯ ಯಾದವ್ (ವಿಕೀ), ರಾಜ್ ಅನಾಗ್ ಬಾವಾ, ಮಾನವ್ ಪಾರಖ್, ಕೌಶಾಕ್ ತಂಬೆ, ಆರ್‌ಎಸ್ ಹಂಗಾರ್ಕೆರ್, ವಸು ವಾಟ್ಸ್, ವಿಕಿ ಒಟ್ಸಾವಲ್, ರವಿ ಕುಮಾರ್, ಗಾರ್ವ್ ಸಂಗ್ವಾನ್.
ಮೀಸಲು ಆಟಗಾರರು: ರಿಶಿತ್ ರೆಡ್ಡಿ, ಉದಯ್ ಶಹರಣ್, ಅಂಶ್ ಗೊಸಾಯ್, ಅಮ್ರಿತ್ ರಾಜ್ ಉಪಾದ್ಯಾಯ್, ಪಿಎಂ ಸಿಂಗ್ ರಾಥೋಡ್.