

ಮೆಲ್ಬೋರ್ನ್: ಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತ ಪುರುಷರ ತಂಡ ಸೀಮಿತ ಓವರ್‌ಗಳ ಸರಣಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಮೂರು ಏಕದಿನ ಹಾಗೂ ಐದು ಪಂದ್ಯಗಳ ಟಿ20 ಸರಣಿಗಳಿಗೆ
ಆತಿಥ್ಯ ವಹಿಸುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಭಾನುವಾರ ತಿಳಿಸಿದೆ.
ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಗೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಸೀಮಿತ ಓವರ್‌ಗಳ ನಡೆಯಲಿದ್ದು, ಅಕ್ಟೋಬರ್ 19ರಂದು ಪರ್ತ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗೆ ಚಾಲನೆ ದೊರೆಯಲಿದೆ. ನಂತರ ಅ.29ರಿಂದ ಕ್ಯಾನ್‌ಬೆರದಲ್ಲಿ ಐದು ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. 2024-25ರ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ದೊರೆತ ಪ್ರೋತ್ಸಾಹ ಹಾಗೂ ಯಶಸ್ಸಿನ ಬೆನ್ನಲ್ಲೇ 2023ರ ಏಕದಿನ ವಿಶ್ವಕಪ್ ೈನಲಿಸ್ಟ್‌ಗಳ ನಡುವಿನ ಸರಣಿ ಆಯೋಜನೆಗೆ ಆಸ್ಟ್ರೇಲಿಯಾ ಕ್ರಿಕೆಟ್ ಆಸಕ್ತಿ ವಹಿಸಿದೆ ಎನ್ನಲಾಗಿದೆ. ಈ ಸರಣಿಯೊಂದಿಗೆ ಆಸ್ಟ್ರೇಲಿಯಾ 2025-26ರ ಕ್ರಿಕೆಟ್ ಋತು ಆರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ 8 ರಾಜ್ಯ ಹಾಗೂ ನಗರಗಳಲ್ಲಿ ನಡೆಯಲಿದೆ. ಭಾರತ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮುನ್ನ ಈ ಸರಣಿ ಪೂರ್ವ ಸಿದ್ಧತೆ ಎನಿಸಿದೆ.
ದಿನಾಂಕ ಪಂದ್ಯ ಸ್ಥಳ
ಅ.19 ಮೊದಲ ಏಕದಿನ, ಪರ್ತ್
ಅ.23 ಎರಡನೇ ಏಕದಿನ, ಅಡಿಲೇಡ್
ಅ.25 ಮೂರನೇ ಏಕದಿನ, ಸಿಡ್ನಿ
ಟಿ20
ಅ.29 ಮೊದಲ ಟಿ20, ಕ್ಯಾನ್‌ಬೆರ
ಅ.31 ಎರಡನೇ ಟಿ20, ಮೆಲ್ಬೋರ್ನ್
ನ.2 ಮೂರನೇ ಟಿ20, ಹೋಬರ್ಟ್
ನ.6 ನಾಲ್ಕನೇ ಟಿ20, ಗೋಲ್ಡ್ ಕೋಸ್ಟ್
ನ.8 ಐದನೇ ಟಿ20, ಬ್ರಿಸ್ಬೇನ್