2026ರ ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿ: ಭಾರತಕ್ಕೆ ಇಂದು ಬಲಿಷ್ಠ ಕತಾರ್ ಎದುರಾಳಿ

New-Project-33-1
Published on

ಭುವನೇಶ್ವರ: ಭಾರತ ುಟ್‌ಬಾಲ್ ತಂಡ 2026ರ ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯ 2ನೇ ಸುತ್ತಿನ ತನ್ನ 2ನೇ ಪಂದ್ಯದಲ್ಲಿ ಬಲಿಷ್ಠ ಕತಾರ್ ತಂಡವನ್ನು ಎದುರಿಸಲಿದ್ದು, ಕಳಿಂಗಾ ಕ್ರೀಡಾಂಗಣದಲ್ಲಿ ಮಂಗಳವಾರ ಎರಡು ತಂಡಗಳು ಮುಖಾಮುಖಿಯಾಗಲಿವೆ.

ಮೊದಲ ಪಂದ್ಯದಲ್ಲಿ ಕುವೈತ್ ಎದುರು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. 2019ರಲ್ಲಿ ಕತಾರ್ ಎದುರು ಕೊನೆಯದಾಗಿ ಆಡಿದ್ದ ಭಾರತ ಗೋಲು ರಹಿತ ಡ್ರಾ ಸಾಧಿಸಿತ್ತು. ಕತಾರ್ ತಂಡ ಉತ್ತಮ ಾರ್ಮ್‌ನಲ್ಲಿದ್ದು, 2019ರಲ್ಲಿ ಏಷ್ಯನ್ ಚಾಂಪಿಯನ್ ಎನಿಸಿತ್ತು. ಫಿಾ ರ‌್ಯಾಂಕಿಂಗ್‌ನಲ್ಲಿ ಭಾರತಕ್ಕಿಂತ ಉನ್ನತ ಶ್ರೇಯಾಂಕ ಹೊಂದಿರುವ ಕತಾರ್ 61ನೇ ಸ್ಥಾನದಲ್ಲಿದ್ದು, ಹಿಂದಿನ ಪಂದ್ಯದಲ್ಲಿ ಅ್ಘಾನಿಸ್ತಾನ ಎದುರು 8-1ರಿಂದ ಗೆಲುವು ದಾಖಲಿಸಿದೆ.

ಎ ಗುಂಪಿನಲ್ಲಿ ಕತಾರ್, ಕುವೈತ್ ಹಾಗೂ ಅ್ಘಾನಿಸ್ತಾನ ಜತೆಗೆ ಸ್ಥಾನ ಪಡೆದಿರುವ ಭಾರತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಗುಂಪಿನ ಅಗ್ರ 2 ತಂಡಗಳು ವಿಶ್ವಕಪ್ ಅರ್ಹತಾ ಟೂರ್ನಿಯ ಮೂರನೇ ಸುತ್ತಿಗೆ ಅರ್ಹತೆ ಪಡೆಯಲಿವೆ. ಜತೆಗೆ 2027ರ ಎಎ್ಸಿ ಏಷ್ಯನ್ ಕಪ್‌ಗೂ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ. ಬ್ಲೂ ಟೈಗರ್ಸ್‌ ಖ್ಯಾತಿಯ ಭಾರತ ತಂಡ ಇದುವರೆಗೆ ಒಮ್ಮೆಯೂ ಮೂರನೇ ಸುತ್ತಿಗೇರಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net