ಡಬ್ಲ್ಯುಟಿಸಿ ಅಗ್ರಸ್ಥಾನಕ್ಕೆ ಮರಳಿದ ಭಾರತ: ಆಸೀಸ್‌ ನೆಲದಲ್ಲಿ ವಿಶಿಷ್ಠ ದಾಖಲೆ ಬರೆದ ಹಂಗಾಮಿ ನಾಯಕ ಬುಮ್ರಾ

New Project
Published on

ಪರ್ತ್: ತವರಿನಲ್ಲಿ ಪ್ರವಾಸಿ ನ್ಯೂಜಿಲೆಂಡ್ ಎದುರು ವೈಟ್‌ವಾಷ್‌ಗೆ ಒಳಗಾದ ಒತ್ತಡದಲ್ಲಿ ಕಾಂಗರೂ ನೆಲಕ್ಕೆ ಕಾಲಿಟ್ಟ ಭಾರತ ತಂಡ, ಕಾಯಂ ನಾಯಕ ರೋಹಿತ್ ಶರ್ಮ ಹಾಗೂ ಗಾಯಾಳು ಶುಭಮಾನ್ ಗಿಲ್ ಅಲಭ್ಯತೆ ನಡುವೆಯೂ ಪ್ರಚಂಡ ನಿರ್ವಹಣೆ ತೋರುವ ಮೂಲಕ ಪ್ರತಿಷ್ಠಿತ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಕಂಡಿದೆ.

ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ (89 ರನ್, 101 ಎಸೆತ, 8 ಬೌಂಡರಿ) ಪ್ರತಿರೋಧದ ನಡುವೆಯೂ ಹಂಗಾಮಿ ನಾಯಕ ಜಸ್‌ಪ್ರೀತ್ ಬುಮ್ರಾ (42ಕ್ಕೆ 3) ಹಾಗೂ ವೇಗಿ ಮೊಹಮದ್ ಸಿರಾಜ್ (51ಕ್ಕೆ 3) ಸಂಘಟಿಸಿದ ಬಿಗಿ ದಾಳಿಯ ನೆರವಿನಿಂದ ಪ್ರವಾಸಿ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 295 ರನ್‌ಗಳ ಐತಿಹಾಸಿಕ ಗೆಲುವು ಒಲಿಸಿಕೊಂಡಿದೆ. ಇನ್ನೂ ಒಂದು ದಿನದಾಟ ಬಾಕಿ ಇರುವಂತೆಯೇ ಪಂದ್ಯ ಗೆದ್ದ ಟೀಮ್ ಇಂಡಿಯಾ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿ ೈನಲ್ ರೇಸ್‌ನಲ್ಲಿ ಬಲ ಹೆಚ್ಚಿಸಿಕೊಂಡಿದೆ. ಸೋಲಿನೊಂದಿಗೆ ಆಸ್ಟ್ರೇಲಿಯಾ ತಂಡ 2ನೇ ಸ್ಥಾನಕ್ಕೆ ಇಳಿದಿದೆ.

ಆಪ್ಟಸ್ ಸ್ಟೇಡಿಯಂನಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ 534 ರನ್ ಸವಾಲಿಗೆ ಪ್ರತಿಯಾಗಿ 3 ವಿಕೆಟ್‌ಗೆ 12 ರನ್‌ಗಳಿಂದ ನಾಲ್ಕನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡ ದಿನದ ಅಂತಿಮ ಅವಧಿಯವರೆಗೂ ಹೋರಾಡಿತು. ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ (47) ಜತೆಯಾಟ ಭಾರತೀಯರು ವಿಜಯೋತ್ಸವಕ್ಕೆ ಕಾಯುವಂತೆ ಮಾಡಿತು. ಅಂತಿಮವಾಗಿ ಚಹಾ ವಿರಾಮದ ಬಳಿಕ 58.4 ಓವರ್‌ಗಳಲ್ಲಿ 238 ರನ್‌ಗಳಿಗೆ ಸರ್ವಪತನ ಕಂಡ ಆಸ್ಟ್ರೇಲಿಯಾ ಆಪ್ಟಸ್ ಕ್ರೀಡಾಂಗಣದಲ್ಲಿ ಮೊದಲ ಸೋಲಿನ ರುಚಿ ಕಂಡಿತು.

1. ಜಸ್‌ಪ್ರೀತ್ ಬುಮ್ರಾ ಪರ್ತ್‌ನ ಆಪ್ಟಸ್ ಅಂಗಣದಲ್ಲಿ ಗೆಲುವು ದಾಖಲಿಸಿ ವಿಶ್ವದ ಮೊದಲ ಪ್ರವಾಸಿ ನಾಯಕ. ಜತೆಗೆ ಪರ್ತ್‌ನಲ್ಲಿ (ವಾಕಾ ಹಾಗೂ ಆಪ್ಟಸ್) ಈ ಸಾಧನೆ ಮಾಡಿದ 2ನೇ ಭಾರತೀಯ ನಾಯಕ. ಅನಿಲ್ ಕುಂಬ್ಳೆ (2008) ಮೊದಲಿಗರು.

2. 2018ರ ಬಳಿಕ ಆಸೀಸ್ ಪ್ರವಾಸದ ಮೊದಲ ಟೆಸ್ಟ್‌ನಲ್ಲಿ ಭಾರತ ಗೆಲುವು ದಾಖಲಿಸಿದ ಮೊದಲ ದೃಷ್ಟಾಂತ ಇದಾಗಿದೆ. 2018ರ ಅಡಿಲೇಡ್ ಟೆಸ್ಟ್‌ನಲ್ಲಿ ಮೊದಲ ಬಾರಿ ಜಯ ಸಾಧಿಸಿತ್ತು. ಜತೆಗೆ 21ನೇ ಶತಮಾನದಲ್ಲಿ ಆಸ್ಟ್ರೇಲಿಯಾ ತಂಡ ತವರಿನ ಸರಣಿಯ ಮೊದಲ ಪಂದ್ಯದಲ್ಲಿ ಸೋಲುಂಡ 4ನೇ ದೃಷ್ಟಾಂತ ಇದಾಗಿದೆ. ದ.ಆಫ್ರಿಕಾ (2008, 2016) ಈ ಮುನ್ನ ಎರಡು ಬಾರಿ ಆಸೀಸ್ ತಂಡ ಮಣಿಸಿತ್ತು.

2. ಆಸ್ಟ್ರೇಲಿಯಾ ಎದುರು ಭಾರತ ದಾಖಲಿಸಿದ 2ನೇ ಗರಿಷ್ಠ ಹಾಗೂ ಆಸೀಸ್ ನೆಲದಲ್ಲಿ ದಾಖಲಿಸಿ ಗರಿಷ್ಠ ರನ್ ಅಂತರದ ಗೆಲುವು ಇದಾಗಿದೆ. 2008ರ ಮೊಹಾಲಿ ಟೆಸ್ಟ್‌ನ 320 ರನ್ ಗೆಲುವು ಮೊದಲ ಗರಿಷ್ಠ. ಆಸೀಸ್ ನೆಲದಲ್ಲಿ 1977ರ ಮೆಲ್ಬೋರ್ನ್‌ನಲ್ಲಿ 222 ರನ್‌ಗಳ ಗೆಲುವು ಹಿಂದಿನ ಗರಿಷ್ಠ ಎನಿಸಿತ್ತು.

2. ಏಷ್ಯಾ ಖಂಡದ ಹೊರಗೆ ಭಾರತ ತಂಡ ಟೆಸ್ಟ್‌ನಲ್ಲಿ ದಾಖಲಿಸಿದ 2ನೇ ಗರಿಷ್ಠ ರನ್ ಅಂತರದ ಗೆಲುವು ಇದಾಗಿದೆ. 2019ರಲ್ಲಿ ವೆಸ್ಟ್ ಇಂಡೀಸ್ ಎದುರು 318 ರನ್ ಜಯ ಮೊದಲ ಗರಿಷ್ಠ.

1. ಆಪ್ಟಸ್ ಅಂಗಣದಲ್ಲಿ ಆಸ್ಟ್ರೇಲಿಯಾ ತಂಡ ಎದುರಿಸಿದ ಮೊದಲ ಸೋಲು ಇದು. ಈ ಹಿಂದೆ ಆಡಿದ 4 ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆಲುವು ದಾಖಲಿಸಿತ್ತು. ಆಪ್ಟಸ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ ಗೆಲುವು ಒಲಿಸಿಕೊಂಡಿದೆ.

3. ಭಾರತ ತಂಡ ವಿದೇಶಿ ನೆಲದಲ್ಲಿ ದಾಖಲಿಸಿದ 3ನೇ ಗರಿಷ್ಠ ರನ್ ಅಂತದ ಜಯ ಇದಾಗಿದ್ದು, ನಾರ್ತ್‌ಸೌಂಡ್‌ನಲ್ಲಿ ವಿಂಡೀಸ್ ಎದುರು 318, ಗಾಲೆಯಲ್ಲಿ ಲಂಕಾ ವಿರುದ್ಧದ 304 ರನ್ ಜಯ ಮೊದಲೆರಡು ಗರಿಷ್ಠ ಅಂತರವಾಗಿವೆ.

1: ಭಾರತ ವಿದೇಶಿ ನೆಲದ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 150 ಅಥವಾ ಅದಕ್ಕಿಂತ ಕಡಿಮೆ ರನ್ ಗಳಿಸಿದಾಗ ಗೆದ್ದ ಮೊದಲ ದೃಷ್ಟಾಂತ ಇದಾಗಿದೆ. ತವರಿನಲ್ಲಿ ಈ ಹಿಂದೆ 2 ಬಾರಿ (2004, 2021) ಇಂಥ ಸಾಧನೆ ಮಾಡಿತ್ತು.

ಡಬ್ಲ್ಯುಟಿಸಿ ಅಗ್ರಸ್ಥಾನಕ್ಕೆ ಮರಳಿದ ಭಾರತ: ಬಾರ್ಡರ್ -ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) ಮೂರನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದೆ. ಡಬ್ಲುೃಟಿಸಿ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ೈನಲ್ ಆಡುವ ಅರ್ಹತೆ ಪಡೆಯಲಿದ್ದು, ಕಿವೀಸ್ ವಿರುದ್ಧದ ಸರಣಿ ಸೋಲಿನ ಜತೆಗೆ 2ನೇ ಸ್ಥಾನಕ್ಕೆ ಕುಸಿತ ಕಂಡಿದ್ದ ಭಾರತ, ಪ್ರಸ್ತುತ ಶೇ.61.11 ಅಂಕದೊಂದಿಗೆ ಮೊದಲ ಸ್ಥಾನಕ್ಕೆ ಮರಳಿದೆ.

ಆಸ್ಟ್ರೇಲಿಯಾ ತಂಡ ಸೋಲಿನೊಂದಿಗೆ ಶೇ. 57.69 ಅಂಕಕ್ಕೆ ಕುಸಿದು ಎರಡನೇ ಸ್ಥಾನಕ್ಕೆ ಇಳಿದಿದೆ. ಡಬ್ಲ್ಯುಟಿಸಿಯಲ್ಲಿ ಭಾರತ ಇನ್ನೂ 4 ಟೆಸ್ಟ್ ಆಡಲಿದ್ದು, ಇದರಲ್ಲಿ ಕನಿಷ್ಠ 3 ಪಂದ್ಯಗಳನ್ನು ಜಯಿಸಿದರೆ ನೇರವಾಗಿ ೈನಲ್ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ. ಆಸ್ಟ್ರೇಲಿಯಾ ತಂಡ ಹಾಲಿ ಸರಣಿಯ 4 ಪಂದ್ಯ ಸೇರಿ ಒಟ್ಟು ಆರು ಟೆಸ್ಟ್ ಆಡಲಿದ್ದು, ಅಗ್ರ 2ರಲ್ಲಿ ಉಳಿಯಲು ಹೋರಾಡಲಿದೆ. ಶ್ರೀಲಂಕಾ ಶೇ.55.56 ಅಂಕದೊಂದಿಗೆ ಮೂರನೇ ಸ್ಥಾನ, ಶೇ.54.55 ಅಂಕ ಹೊಂದಿರುವ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net