ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಮಾರ್ಚ್​ 1ಕ್ಕೆ ಭಾರತ-ಪಾಕ್​ ಪಂದ್ಯ?

web ct
Published on

ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಿಗದಿಯಾಗಿರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಏಕದಿನ ಟೂರ್ನಿಯ ಡ್ರಾಫ್ಟ್​ ವೇಳಾಪಟ್ಟಿಯನ್ನು ಆತಿಥೇಯ ಪಾಕ್​ ಕ್ರಿಕೆಟ್​ ಮಂಡಳಿ (ಪಿಸಿಬಿ) ಸಿದ್ಧಪಡಿಸಿದೆ. ಇದರನ್ವಯ 2025ರ ಮಾರ್ಚ್​ 1ಕ್ಕೆ ಲಾಹೋರ್​ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯವನ್ನು ನಿಗದಿಪಡಿಸಲಾಗಿದೆ. ಆದರೆ ಈ ವೇಳಪಟ್ಟಿಗೆ ಬಿಸಿಸಿಐ ಇನ್ನೂ ಹಸಿರು ನಿಶಾನೆ ತೋರಿಸಿಲ್ಲ ಎಂದು ಐಸಿಸಿ ಮಂಡಳಿಯ ಹಿರಿಯ ಸದಸ್ಯರೊಬ್ಬರು ಬುಧವಾರ ತಿಳಿಸಿದ್ದಾರೆ.

ಫೆಬ್ರವರಿ 19ರಿಂದ ಮಾರ್ಚ್​ 9ರವರೆಗೆ ಟೂರ್ನಿಯನ್ನು ನಿಗದಿಪಡಿಸಲಾಗಿದ್ದು, ಫೈನಲ್​ ಪಂದ್ಯಕ್ಕೆ ಮಾರ್ಚ್​ 10 ಮೀಸಲು ದಿನವಾಗಿರಲಿದೆ. ಬಾರ್ಬಡೋಸ್​ನಲ್ಲಿ ಟಿ20 ವಿಶ್ವಕಪ್​ ಫೈನಲ್​ ವೀಸಲು ಆಹ್ವಾನ ಪಡೆದಿದ್ದ ಪಿಸಿಬಿ ಅಧ್ಯಕ್ಷ ಮೊಹ್ಸಿನ್​ ನಖ್ವಿ, ಟೂರ್ನಿ ಎಲ್ಲ 15 ಪಂದ್ಯಗಳ ವೇಳಾಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದ್ದಾರೆ. ಇದರಲ್ಲಿ ಭದ್ರತೆ ಮತ್ತು ಲಾಜಿಸ್ಟಿಕ್ಸ್​ ಕಾರಣಗಳಿಂದಾಗಿ ಭಾರತದ ಎಲ್ಲ ಲೀಗ್​ ಪಂದ್ಯಗಳನ್ನು ಲಾಹೋರ್​ನಲ್ಲಿ ನಿಗದಿಪಡಿಸಲಾಗಿದೆ. ಒಟ್ಟಾರೆಯಾಗಿ ಲಾಹೋರ್​ನಲ್ಲಿ 7, ಕರಾಚಿಯಲ್ಲಿ 3 ಮತ್ತು ರಾವಲ್ಪಿಂಡಿಯಲ್ಲಿ 5 ಪಂದ್ಯಗಳನ್ನು ನಿಗದಿಪಡಿಸಲಾಗಿದೆ ಎಂದು ಐಸಿಸಿ ಮಂಡಳಿ ಸದಸ್ಯ ತಿಳಿಸಿದ್ದಾರೆ.

ಉದ್ಘಾಟನಾ ಪಂದ್ಯ ಕರಾಚಿಯಲ್ಲಿ ನಡೆದರೆ, 2 ಸೆಮಿೈನಲ್​ ಪಂದ್ಯಗಳನ್ನು ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ನಿಗದಿಪಡಿಸಲಾಗಿದೆ. ೈನಲ್​ ಪಂದ್ಯಕ್ಕೆ ಲಾಹೋರ್​ ಆತಿಥ್ಯ ವಹಿಸಲಿದೆ. ಭಾರತ ತಂಡ ಸೆಮಿೈನಲ್​ಗೇರಿದರೆ ಈ ಪಂದ್ಯವನ್ನೂ ಲಾಹೋರ್​ನಲ್ಲೇ ಆಡಲಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.

ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್​ ತಂಡಗಳು ಎ ಗುಂಪಿನಲ್ಲಿದ್ದರೆ, ಆಸ್ಟ್ರೆಲಿಯಾ, ದಣ ಆಫ್ರಿಕಾ, ಇಂಗ್ಲೆಂಡ್​, ಅ್ಘಾನಿಸ್ತಾನ ಬಿ ಗುಂಪಿನಲ್ಲಿವೆ.

2023ರ ಏಷ್ಯಾಕಪ್​ ಪಾಕ್​ ಆತಿಥ್ಯದಲ್ಲಿ ನಡೆದ ಕೊನೆಯ ಪ್ರಮುಖ ಟೂರ್ನಿಯಾಗಿದೆ. ಆದರೆ ಇದರಲ್ಲಿ ಭಾರತ ಭಾಗವಹಿಸಿದ್ದರೂ, ಪಾಕಿಸ್ತಾನಕ್ಕೆ ಹೋಗಿರಲಿಲ್ಲ. ಹೀಗಾಗಿ ಶ್ರೀಲಂಕಾಕ್ಕೂ ಜಂಟಿ ಆತಿಥ್ಯ ನೀಡಲಾಗಿತ್ತು ಮತ್ತು ಭಾರತ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಿತ್ತು. ಇದನ್ನು ಹೈಬ್ರಿಡ್​ ಮಾದರಿಯ ಟೂರ್ನಿ ಎಂದು ಕರೆಯಲಾಗಿದೆ. ಆಗ ಭಾರತ ತಂಡಕ್ಕೆ ಪಾಕ್​ಗೆ ಪ್ರಯಾಣಿಸಲು ಕೇಂದ್ರ ಸರ್ಕಾರದ ಅನುಮತಿ ಲಭಿಸಿರಲಿಲ್ಲ. ಈ ಸಲವೂ ಸರ್ಕಾರದ ಅನುಮತಿ ಅನುಮಾನವೆನಿಸಿದೆ. ಹೀಗಾಗಿ ಭಾರತ ತನ್ನ ಪಂದ್ಯಗಳನ್ನು ತಟಸ್ಥ ತಾಣದಲ್ಲೇ ಆಡಬೇಕಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net