ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಗೊಂದಲದ ನಡುವೆ ಇಂದು ಭಾರತ-ಪಾಕ್ ಕಿರಿಯರ ಕಾದಾಟ

New Project
Published on

ದುಬೈ: ಭಾರತದ ಹಿರಿಯರ ತಂಡವನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿರುವ ನಡುವೆ ಉಭಯ ದೇಶಗಳ ಕಿರಿಯರ ತಂಡಗಳು ಪರಸ್ಪರ ಕಾದಾಡಲು ಸಜ್ಜಾಗಿವೆ. 19 ವಯೋಮಿತಿಯ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಶನಿವಾರ ಪರಸ್ಪರ ಎದುರಾಗಲಿದ್ದು, ಮೊಹಮದ್ ಅಮಾನ್ ನೇತೃತ್ವದ ಭಾರತ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ.

ಶುಕ್ರವಾರ ಆರಂಭಗೊಂಡಿರುವ ಟೂರ್ನಿಯಲ್ಲಿ ಎಂಟು ಬಾರಿಯ ಚಾಂಪಿಯನ್ ಭಾರತ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಪಾಕಿಸ್ತಾನ, ಜಪಾನ್ ಹಾಗೂ ಯುಎಇ ಗುಂಪಿನ ಇತರ ತಂಡಗಳಾಗಿವೆ. ಎ ಗುಂಪಿನಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶ, ಶ್ರೀಲಂಕಾ, ಅ್ಘಾನಿಸ್ತಾನ ಹಾಗೂ ನೇಪಾಳ ತಂಡಗಳು ಸ್ಥಾನ ಪಡೆದಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಡಿ.6ರಂದು ಸೆಮಿೈನಲ್‌ನಲ್ಲಿ ಸೆಣಸಲಿದ್ದು, ಡಿ.8ಕ್ಕೆ ೈನಲ್ ಪಂದ್ಯ ನಿಗದಿಯಾಗಿದೆ. ಲ್ರೌಂಡರ್ ಹಾರ್ದಿಕ್ ರಾಜ್, ಕೆಪಿ ಕಾರ್ತಿಕೇಯ ಹಾಗೂ ಸಮರ್ಥ್ ನಾಗಾರಾಜ್ ತಂಡದಲ್ಲಿರುವ ಕನ್ನಡಿಗರು.

ಐಪಿಎಲ್ 18ನೇ ಆವೃತ್ತಿಯ ಆಟಗಾರರ ಮೆಗಾ ಹರಾಜಿನಲ್ಲಿ ₹1.10 ಕೋಟಿಗೆ ರಾಜಸ್ಥಾನ ರಾಯಲ್ಸ್ ಸೇರಿರುವ 13 ವರ್ಷದ ವೈಭವ್ ಸೂರ್ಯವಂಶಿ ಹಾಗೂ ಮೂಲಬೆಲೆಗೆ ಸಿಎಸ್‌ಕೆ ಸೇರಿರುವ ಆಂಡ್ರೆ ಸಿದ್ದಾರ್ಥ್ ಟೂರ್ನಿಯ ಕೇಂದ್ರಬಿಂದುವಾಗಿದ್ದಾರೆ. ಆ ಕಳೆದ ಬಾರಿ ಸೆಮೀಸ್‌ನಲ್ಲಿ ನಿರಾಸೆ ಅನುಭವಿದ್ದ ಭಾರತ ಈ ಬಾರಿ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದೆ. ಭಾರತ ತನ್ನ ಲೀಗ್ ಪಂದ್ಯದಲ್ಲಿ ಜಪಾನ್ (ಡಿ.2), ಯುಎಇ (ಡಿ.4) ಎದುರು ಸೆಣಸಲಿದೆ.

ಆರಂಭ: ಬೆಳಗ್ಗೆ 10.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net