ವಿಶ್ವ ಚಾಂಪಿಯನ್ಸ್ ಮಣಿಸಿ ಇಂಡಿಯಾ ಓಪನ್ ಗೆದ್ದ ಭಾರತೀಯ ಷಟ್ಲರ್ಸ್‌

india open badminton for web
Published on

ನವದೆಹಲಿ: ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್, ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ಸಾಯಿರಾಜ್-ಚಿರಾಗ್ ಶೆಟ್ಟಿ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಲಕ್ಷ್ಯ ಸೇನ್ ಮೊದಲ ಬಾರಿಗೆ ಈ ಪ್ರತಿಷ್ಠಿತ ಟ್ರೋಫಿ ಗೆದ್ದರೆ, ಸಾತ್ವಿಕ್-ಚಿರಾಗ್ ಇಂಡಿಯನ್ ಓಪನ್ ಜಯಿಸಿದ ಭಾರತದ ಮೊದಲ ಪುರುಷರ ಜೋಡಿ ಎನಿಸಿಕೊಂಡಿತು. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ವಿಶ್ವ ಚಾಂಪಿಯನ್ ಕಂಚಿನ ಪದಕ ವಿಜೇತ ಷಟ್ಲರ್ ಲಕ್ಷ್ಯ ಸೇನ್ 24-22, 21-17 ನೇರ ಗೇಮ್‌ಗಳಿಂದ ವಿಶ್ವ ಚಾಂಪಿಯನ್ ಸಿಂಗಾಪುರದ ಕೀನ್ ಯೆವ್ ಅವರನ್ನು 54 ನಿಮಿಷಗಳ ಹಣಾಹಣಿಯಲ್ಲಿ ಸೋಲಿಸಿದರು. ಮೊದಲ ಗೇಮ್‌ನಲ್ಲಿ ಸಿಂಗಾಪುರದ ಆಟಗಾರನಿಂದ ಕೊಂಚ ಪ್ರತಿರೋಧ ಎದುರಿಸಿದರೂ ಎರಡನೇ ಗೇಮ್‌ನಲ್ಲಿ ಪ್ರಭುತ್ವ ಸಾಧಿಸಿದ ಲಕ್ಷ್ಯ ಸೇನ್ ಭರ್ಜರಿ ಗೆಲುವಿನ ನಗೆ ಬೀರಿತು.

* ವಿಶ್ವ ಚಾಂಪಿಯನ್ಸ್‌ಗೆ ಸೋಲಿನ ರುಚಿ

ಉತ್ತಮ ಲಯದಲ್ಲಿರುವ ಸಾತ್ವಿಕ್-ಚಿರಾಗ್ ಜೋಡಿ 21-16, 26-24 ರಿಂದ ಮೂರು ಬಾರಿ ವಿಶ್ವ ಚಾಂಪಿಯನ್ ಜೋಡಿ ಇಂಡೋನೇಷ್ಯಾದ ಮೊಹಮದ್ ಅಶಾನ್ ಹಾಗೂ ಹೆಂಡ್ರ ಸೆತಿಯಾವನ್ ಜೋಡಿಯನ್ನು 43 ನಿಮಿಷಗಳ ಹಣಾಹಣಿಯಲ್ಲಿ ಮಣಿಸಿತು. ಇಂಡೋನೇಷ್ಯಾ ಜೋಡಿಯಿಂದ ಪ್ರಬಲ ಪೈಪೋಟಿ ಎದುರಿಸಿದರೂ ಭಾರತದ ಯುವ ಜೋಡಿ ಭರ್ಜರಿ ನಿರ್ವಹಣೆ ಮೂಲಕ ಗಮನಸೆಳೆಯಿತು. ಇದರೊಂದಿಗೆ ಮುಂಬರುವ ಏಷ್ಯಾಡ್, ಕಾಮನ್ವೆಲ್ತ್ ಗೇಮ್ಸ್‌ಗೆ ಭರ್ಜರಿಯಾಗಿ ತಯಾರಿ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net