

ಅಮೆರಿಕಾ: ಇಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಸಮರ ಸಾರುತ್ತಿದ್ದು, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಾಕ್, ಭಾರತಕ್ಕೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು.
ಪ್ರಾರಂಭದಲ್ಲೇ ಪಂದ್ಯಕ್ಕೆ ಮಳೆಯಿಂದ ಅಡ್ಡಿ ಉಂಟುಮಾಡಿದ್ದೇ ಆದರೂ ಇದೀಗ ಪಂದ್ಯ ರಿ-ಸ್ಟಾರ್ಟ್ ಪಡೆದುಕೊಂಡಿತು. 2ನೇ ಓವರ್ ಅಂತ್ಯಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ಗಳು ಪತನಗೊಂಡಿದ್ದು, ಟೀಂ ಇಂಡಿಯಾಗೆ ಭಾರೀ ಆಘಾತವನ್ನು ತಂದೊಡ್ಡಿದೆ.