

IND vs ENG: ಲಾರ್ಡ್ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ನ ಐದನೇ ದಿನದಂದು ಸ್ಟೋಕ್ಸ್ ಪಡೆ ನೀಡಿದ ಗುರಿ ತಲುಪವಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿತು.
ಐದನೇ ದಿನದಂದು ಇಂಗ್ಲೆಂಡ್ ನೀಡಿದ್ದ 193 ರನ್ ಗುರಿಯನ್ನು ಬೆನ್ನತ್ತುವಲ್ಲಿ ಎಡವಿದ ಟೀಮ್ ಇಂಡಿಯಾ ಬ್ಯಾಟರ್ಗಳ ಪೈಕಿ ಕೊನೆಯವರೆಗೂ ನಿಂತು ಆಡಿದ್ದು ರವೀಂದ್ರ ಜಡೇಜಾ ಮಾತ್ರ. ಕ್ಯಾಪ್ಟನ್ ಶುಭಮನ್ ಗಿಲ್ (6), ಯಶಸ್ವಿ ಜೈಸ್ವಾಲ್ (0), ಕರುಣ್ ನಾಯರ್ (14), ರಿಷಭ್ ಪಂತ್ (9), ವಾಷಿಂಗ್ಟನ್ ಸುಂದರ್ (0) ಮತ್ತು ನಿತೀಶ್ ಕುಮಾರ್ ರೆಡ್ಡಿ (14) ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಸ್ಟಾರ್ ಹಾಗೂ ಬಲಿಷ್ಠ ಬ್ಯಾಟಿಂಗ್ ಲೈನ್ನಲ್ಲಿದ್ದವರೇ ಕ್ರೀಸ್ಗೆ ಅಂಟಿ ನಿಲ್ಲಲು ಹೆಣಗಾಡಿದ್ದೇ ಟೀಮ್ ಇಂಡಿಯಾ ಸೋಲಿಗೆ ದೊಡ್ಡ ಕಾರಣವಾಯಿತು. ಅರ್ಧಶತಕ ಸಿಡಿಸಿದ್ದಲ್ಲದೇ ಪಂದ್ಯದ ಕೊನೆಯವರೆಗೂ ಅಜೇಯರಾಗಿ ಉಳಿದಿದ್ದ ಜಡೇಜಾಗೆ (61 ರನ್) ಉತ್ತಮ ಸಾಥ್ ಸಿಗಲಿಲ್ಲ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಗಿಲ್ ಪಡೆಗೆ ಸೋಲಿನ ರುಚಿ ದೊರಕಿದೆ.