ಭಾರತ ಹಾಕಿ ತಂಡಕ್ಕೆ ಸತತ 4ನೇ ಸೋಲು

New-Project-2-5
Published on

ಪರ್ತ್: ನೀರಸ ನಿರ್ವಹಣೆ ಮುಂದುವರಿಸಿದ ಭಾರತ ಪುರುಷರ ಹಾಕಿ ತಂಡ 1-3 ಗೋಲುಗಳ ಅಂತರದಿಂದ ಆತಿಥೇಯ ಆಸ್ಟ್ರೇಲಿಯಾ ಎದುರು ಸತತ 4ನೇ ಸೋಲು ಅನುಭವಿಸಿದೆ. ಶುಕ್ರವಾರ ನಡೆದ ಹಾಕಿ ಟೆಸ್ಟ್ ಸರಣಿಯ 4ನೇ ಪಂದ್ಯದ 12ನೇ ನಿಮಿಷದಲ್ಲಿ ನಾಯಕ ಹರ್ಮಾನ್ ಪ್ರೀತ್ ಸಿಂಗ್ ಸಿಡಿಸಿದ ಗೋಲಿನ ನೆರವಿನಿಂದ ಆರಂಭಿಕ ಮುನ್ನಡೆ ಸಾಧಿಸಿದ ಭಾರತಕ್ಕೆ ನಂತರ ಆಸೀಸ್ ತಿರುಗೇಟು ನೀಡಿತು. ಆಸ್ಟ್ರೇಲಿಯಾ ಪರ ಜೆರ್ಮಿ ಹ್ಯಾವರ್ಡ್ (19, 47ನೇ ನಿಮಿಷ), ಜಾಕ್ ವ್ಲೆಚ್ (54) ಗೋಲು ದಾಖಲಿಸಿದರು. ಪಂದ್ಯದ ಅಂತಿಮ 4 ನಿಮಿಷದಲ್ಲಿ 3 ಪೆನಾಲ್ಟಿ ಅವಕಾಶ ಪಡೆದ ಭಾರತ ಗೋಲು ಸಿಡಿಸುವಲ್ಲಿ ವಿಲವಾಯಿತು. ಪ್ಯಾರಿಸ್ ಒಲಿಂಪಿಕ್ಸ್ ಪೂರ್ವಸಿದ್ಧತೆಯ ಭಾಗವಾಗಿರುವ ಸರಣಿಯ 5ನೇ ಹಾಗೂ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net