

ಬೆಂಗಳೂರು: ನ್ಯೂಜಿಲೆಂಡ್ ಎದುರು ಮೊದಲ ಟೆಸ್ಟ್‌ನ ಸೋಲಿನ ನಡುವೆಯೂ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) ಮೂರನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆದರೆ ಪಾಯಿಂಟ್ಸ್‌ನಲ್ಲಿ ಕುಸಿತ ಕಂಡಿದೆ. 2023-25ರ ಆವೃತ್ತಿಯಲ್ಲಿ ಮೂರನೇ ಸೋಲು ಅನುಭವಿಸಿದ ರೋಹಿತ್ ಪಡೆ ಶೇ.74.24 ಪಾಯಿಂಟ್ಸ್‌ನಿಂದ ಶೇ.68.05ಕ್ಕೆ ಇಳಿದಿದೆ.
ಡಬ್ಲ್ಯುಟಿಸಿಯಲ್ಲಿ ಇನ್ನು 7 ಟೆಸ್ಟ್ ಆಡಲಿದ್ದು, ಕಿವೀಸ್ ವಿರುದ್ಧ ಮುಂದಿನ ಎರಡು ಟೆಸ್ಟ್ ಗೆದ್ದರೆ ಡಬ್ಲ್ಯುಟಿಸಿ ೈನಲ್‌ಗೇರುವ ಹಾದಿ ಸುಗಮವಾಗಲಿದೆ. ಸತತ ಮೂರನೇ ಬಾರಿಗೆ ಡಬ್ಲುೃಟಿಸಿ ೈನಲ್‌ಗೇರುವ ಹಂಬಲದಲ್ಲಿರುವ ಭಾರತ ಭಾರತ ಸದ್ಯ ಶೇ. 68.05 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಅಗ್ರ 2ರಲ್ಲಿ ಸ್ಥಾನ ಉಳಿಸಿಕೊಳ್ಳಲು ಇನ್ನೂ 3 ಜಯ, 1 ಡ್ರಾ ಅಗತ್ಯವಿದೆ. ಕಿವೀಸ್ ಬಳಿಕ ಕೊನೇ 5 ಟೆಸ್ಟ್‌ಗಳನ್ನು ಆಸ್ಟ್ರೇಲಿಯಾದಲ್ಲಿ ಆಡುವ ಸವಾಲು ಹೊಂದಿರುವ ಭಾರತ, ಆಸೀಸ್‌ನಲ್ಲಿ ಕನಿಷ್ಠ 1 ಪಂದ್ಯ ಗೆದ್ದರೆ ೈನಲ್ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ. ಜತೆಗೆ ಇತರ ತಂಡಗಳ ಲಿತಾಂಶವೂ ವರವಾಗಬೇಕು. ಐತಿಹಾಸಿಕ ಗೆಲುವಿನೊಂದಿಗೆ ನ್ಯೂಜಿಲೆಂಡ್ ಶೇ.44.44 ಅಂಕದೊಂದಿಗೆ 6ನೇ ಸ್ಥಾನದಿಂದ 4ನೇ ಸ್ಥಾನಕ್ಕೇರಿದೆ.
ವಾಷಿಂಗ್ಟನ್ ಸುಂದರ್ ಹೊಸ ಸೇರ್ಪಡೆ ಅಕ್ಟೋಬರ್ 24 ರಂದು ಪುಣೆಯಲ್ಲಿ ಆರಂಭವಾಗಲಿರುವ ಎರಡನೇ ಹಾಗೂ ಮೂರನೇ ಪಂದ್ಯಕ್ಕೆ ಬಿಸಿಸಿಐ ಪರಿಷ್ಕೃತ ಭಾರತ ತಂಡವನ್ನು ಹೆಸರಿಸಿದ್ದು, ತಮಿಳುನಾಡಿನ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹೊಸ ಸೇರ್ಪಡೆ ಎನಿಸಿದ್ದಾರೆ. ಈಗಾಗಲೆ ತಂಡದಲ್ಲಿ ಎಡಗೈ ಆಲ್ರೌಂಡರ್ ಅಕ್ಷರ್ ಪಟೇಲ್ ಸ್ಥಾನ ಪಡೆದಿರುವ ನಡುವೆ ಬಲಗೈ ಆಲ್ರೌಂಡರ್‌ಗೆ ಮಣೆ ಹಾಕಿರುವ ನಡೆ ಕುತೂಹಲ ಮೂಡಿಸಿದೆ. ಹಾಲಿ ರಣಜಿ ಟೂರ್ನಿಯ ಎರಡನೇ ಪಂದ್ಯದಲ್ಲಿ ತಮಿಳುನಾಡು ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ವಾಷಿಂಗ್ಟನ್ ಸುಂದರ್, 152 ರನ್ ಕಲೆಹಾಕಿದರು. ನಂತರ ಬೌಲಿಂಗ್‌ನಲ್ಲಿಯೂ 2 ವಿಕೆಟ್ ಪಡೆದುಕೊಂಡಿದ್ದಾರೆ.