

ಚೆನ್ನೈ: ಏಕದಿನ ಸರಣಿ ಹಾಗೂ ಏಕೈಕ ಟೆಸ್ಟ್ ಪಂದ್ಯ ಗೆದ್ದು ಬೀಗುತ್ತಿರುವ ಭಾರತ ತಂಡ ಮಹಿಳೆಯರ ಟಿ20 ಸರಣಿಗೆ ಸಜ್ಜಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ಶುಕ್ರವಾರ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಮುಂಬರುವ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್‌ಗೆ ಪೂರ್ವಸಿದ್ಧತೆ ಎನಿಸಿದೆ.
ಶ್ರೀಲಂಕಾದಲ್ಲಿ ಜುಲೈ 19ರಂದು ಆರಂಭವಾಗಲಿರುವ ಏಷ್ಯಾಕಪ್ ಹಾಗೂ ಬಾಂಗ್ಲಾದೇಶದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುನ್ನ ಹರ್ಮಾನ್‌ಪ್ರೀತ್ ಕೌರ್ ಪಡೆ ಆಡಲಿರುವ ಕೊನೆಯ ಸೀಮಿತ ಮಾದರಿಯ ಸರಣಿ ಇದಾಗಿದೆ. 2023ರಿಂದ ಭಾರತ ತಂಡ ಆಡಿರುವ 7 ಸರಣಿಗಳಲ್ಲಿ 3 ಗೆದ್ದು, 4ರಲ್ಲಿ ಸೋಲು ಅನುಭವಿಸಿದೆ. ಆದರೆ ಏಕದಿನ ಹಾಗೂ ಟೆಸ್ಟ್ ಗೆಲುವು ತಂಡದ ಆತ್ಮವಿಶ್ವಾಸ ವೃದ್ಧಿಸಿದ್ದು, ಇದಕ್ಕೂ ಮುನ್ನ ತವರಿನಾಚೆ ಬಾಂಗ್ಲಾದೇಶ ಎದುರು 5-0 ಸರಣಿ ಗೆಲುವು ದಾಖಲಿಸಿತ್ತು. ಭರ್ಜರಿ ಾರ್ಮ್‌ನಲ್ಲಿರುವ ಉಪನಾಯಕಿ ಸ್ಮತಿ ಮಂದನಾ ರನ್ ಅಬ್ಬರ ಮುಂದುವರಿಸುವ ನಿರೀಕ್ಷೆ ಇದೆ. ಹರ್ಮಾನ್‌ಪ್ರೀತ್, ಶೆಾಲಿ ವರ್ಮ ಸಹ ಲಯಕ್ಕೆ ಮರಳಿದ್ದು ಭಾರತ ಮತ್ತೊಮ್ಮೆ ೇವರಿಟ್ ಎನಿಸಿದೆ.
ಭಾರತ ಪ್ರವಾಸದಲ್ಲಿ ಏಕದಿನ ಸರಣಿ ಕ್ಲೀನ್‌ಸ್ವೀಪ್ ಮುಖಭಂಗದ ಬಳಿಕ ಟೆಸ್ಟ್ ಪಂದ್ಯದಲ್ಲೂ ಸೋಲುಂಡಿರು ದ.ಆಫ್ರಿಕಾ ಟಿ20ಯಲ್ಲಿ ಉತ್ತಮ ಪ್ರದರ್ಶನ ಮೂಲಕ ತವರಿಗೆ ಮರಳುವ ನಿರೀಕ್ಷೆಯಲ್ಲಿದೆ. ಆದರೆ ನಾಯಕಿ ಲೌರಾ ವೋಲ್ವಾರ್ಡ್ ಆಟದ ಮೇಲೆ ತಂಡ ಸಂಪೂರ್ಣವಾಗಿ ಅವಲಂಬಿತವಾಗಿದೆ. ವೋಲ್ವಾರ್ಡ್ ಟಿ20ಯಲ್ಲಿ ಶತಕ ಸಿಡಿಸಿರುವ ದಾಖಲೆ ಹೊಂದಿದ್ದು, ಅನುಭವಿ ಆಲ್ರೌಂಡರ್ ಮಾರಿಜಾನ್ನೆ ಕಾಪ್ ಚುಟುಕು ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಕ್ಲೋಹೆ ಟ್ರೈಯಾನ್ ಪುನರಾಗಮನ ತಂಡದ ಬಲ ಹೆಚ್ಚಿಸಿದೆ.
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋಸಿನಿಮಾ
ಮುಖಾಮುಖಿ: 16
ಭಾರತ: 9
ದ.ಆಫ್ರಿಕಾ: 7