

ಪುಣೆ: ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗುತ್ತಿರುವ ಆತಿಥೇಯ ಭಾರತ ತಂಡ ಏಕದಿನ ವಿಶ್ವಕಪ್ನಲ್ಲಿ ತನ್ನ ಗೆಲುವಿನ ಓಟವನ್ನು ಸತತ 4ನೇ ಪಂದ್ಯಕ್ಕೂ ವಿಸ್ತರಿಸಲು ಸಜ್ಜಾಗಿದೆ. ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮ ಬಳಗ, ಬಾಂಗ್ಲಾದೇಶದ ಸವಾಲು ಎದುರಿಸಲಿದ್ದು, ಬಲಿಷ್ಠ ನಿರ್ವಹಣೆಯನ್ನು ಮುಂದುವರಿಸುವ ಹಂಬಲದಲ್ಲಿದೆ.
ಭಾರತ ತಂಡ ಇತ್ತೀಚೆಗೆ ಏಷ್ಯಾಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಔಪಚಾರಿಕ ಪಂದ್ಯದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಮೀಸಲು ಆಟಗಾರರನ್ನು ಕಣಕ್ಕಿಳಿಸಿದಾಗ ಸೋಲು ಅನುಭವಿಸಿತ್ತು. ಹೀಗಾಗಿ ಭಾರತ ಈ ಬಾರಿ ಬಾಂಗ್ಲಾದೇಶವನ್ನು ಲುವಾಗಿ ಪರಿಗಣಿಸದೆ ಗೆಲುವಿನ ಲಯ ಮುಂದುವರಿಸುವತ್ತ ಗಮನಹರಿಸಲಿದೆ. 2022ರ ಡಿಸೆಂಬರ್ನಲ್ಲಿ ಆಡಿದ ದ್ವಿಪಯ ಏಕದಿನ ಸರಣಿಯಲ್ಲೂ ಭಾರತ 2 ಪಂದ್ಯಗಳಲ್ಲಿ ಬಾಂಗ್ಲಾಗೆ ಮಣಿದಿತ್ತು. ಇದರಿಂದ ಬಾಂಗ್ಲಾ ವಿರುದ್ಧದ ಕೊನೇ 4 ಪಂದ್ಯಗಳಲ್ಲಿ 3ರಲ್ಲಿ ಸೋತಿರುವ ಹಿನ್ನಡೆ ಭಾರತ ತಂಡದ್ದಾಗಿದೆ. ಇದಕ್ಕೀಗ ದಿಟ್ಟ ತಿರುಗೇಟು ನೀಡುವ ಸಮಯ ಭಾರತ ತಂಡದ್ದಾಗಿದೆ.
ಏಷ್ಯಾಕಪ್ ಗೆಲುವಿನೊಂದಿಗೆ ಆತ್ಮವಿಶ್ವಾಸದಿಂದಲೇ ತವರಿನ ವಿಶ್ವಕಪ್ನಲ್ಲಿ ಅಭಿಯಾನ ಆರಂಭಿಸಿದ್ದ ರೋಹಿತ್ ಶರ್ಮ ಪಡೆ ಈಗ ಸತತ 3 ಗೆಲುವಿನೊಂದಿಗೆ ಟೂರ್ನಿಯ ಹಾಟ್ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ. ಈ ಮೂಲಕ 2011ರ ಬಳಿಕ ಮತ್ತೊಮ್ಮೆ ತವರಿನಲ್ಲಿ ವಿಶ್ವಕಪ್ ಎತ್ತಿ ಹಿಡಿಯುವ ಮತ್ತು 13 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸುವ ನಿರೀೆ ಹೆಚ್ಚಿಸಿದೆ. ಇದನ್ನು ಹಾಗೆಯೇ ಕಾಯ್ದುಕೊಳ್ಳಬೇಕಾದರೆ ಭಾರತ ತನ್ನ ಬಲಿಷ್ಠ ನಿರ್ವಹಣೆಯನ್ನೂ ಮುಂದುವರಿಸಬೇಕಾಗಿದೆ.
ಮತ್ತೊಂದೆಡೆ ಬಾಂಗ್ಲಾದೇಶ ಮೊದಲ ಪಂದ್ಯದಲ್ಲಿ ಆ್ಘನ್ ಎದುರು ಗೆದ್ದು ಶುಭಾರಂಭ ಕಂಡಿದ್ದರೂ, ನಂತರ ಇಂಗ್ಲೆಂಡ್, ನ್ಯೂಜಿಲೆಂಡ್ ಎದುರು ಹೀನಾಯ ಸೋಲು ಅನುಭವಿಸಿತ್ತು. ಈಗ ಅಫ್ಘಾನಿಸ್ತಾನ, ನೆದರ್ಲೆಂಡ್ ತಂಡಗಳು ನೀಡಿದ ಅಚ್ಚರಿಯ ಲಿತಾಂಶ ಬಾಂಗ್ಲಾಗೂ ಸ್ಫೂರ್ತಿ ತುಂಬುವ ನಿರೀೆ ಇದೆ. ಪ್ರಮುಖವಾಗಿ, ಬಾಂಗ್ಲಾದ ಎಡಗೈ ವೇಗಿ&ಸ್ಪಿನ್ನರ್ಗಳನ್ನು ಭಾರತ ತಂಡ ಎಚ್ಚರಿಕೆಯಿಂದ ಎದುರಿಸಬೇಕಾಗಿದೆ.
ಅಗ್ರ ಸರದಿ ಬಲಿಷ್ಠ ನಿರ್ವಹಣೆ
ಭಾರತ ಆಡಿದ ಮೊದಲ 3 ಪಂದ್ಯಗಳಲ್ಲೂ ಅಗ್ರ 5 ಬ್ಯಾಟರ್ಗಳೇ ಗಮನಾರ್ಹ ನಿರ್ವಹಣೆ ತೋರಿ ತಂಡಕ್ಕೆ ಆಧಾರವಾಗಿದ್ದಾರೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮಿಂಚಿದ್ದು, ಡೆಂಯಿಂದ ಚೇತರಿಸಿಕೊಂಡು ಪಾಕ್ ವಿರುದ್ಧ ಕಣಕ್ಕಿಳಿದ ಶುಭಮಾನ್ ಗಿಲ್ ಕೂಡ ಶ್ರೀ ಹಳೆಯ ಲಯಕ್ಕೆ ಮರಳಬಹುದು. ಆದರೆ ಭಾರತ ತಂಡದ ಕೆಳ&ಮಧ್ಯಮ ಕ್ರಮಾಂಕದ ಸತ್ವಪರೀೆ ಇನ್ನೂ ನಡೆದಿಲ್ಲ. ಮುಂಬರುವ ಸವಾಲುಗಳಿಗೆ ಭಾರತದ ಕೆಳ ಕ್ರಮಾಂಕವೂ ಸಜ್ಜಾಗಿರಬೇಕಾಗಿದೆ.
ವಿಶ್ವಾಸದಲ್ಲಿ ಬೌಲರ್ಗಳು
ಆಸ್ಟ್ರೆಲಿಯಾವನ್ನು 199 ಮತ್ತು ಪಾಕಿಸ್ತಾನವನ್ನು 191 ರನ್ಗಳಿಗೆ ನಿಯಂತ್ರಿಸಿರುವ ಭಾರತದ ಬೌಲರ್ಗಳು ಪ್ರಚಂಡ ಫಾಮ್ರ್ನಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ಎದುರಾಳಿಗಳಿಗೆ ಕಗ್ಗಂಟಾಗಿದ್ದರೆ, ಮೊಹಮದ್ ಸಿರಾಜ್, ರವೀಂದ್ರ ಜಡೇಜಾ ಜತೆಗೆ ಹಾರ್ದಿಕ್ ಪಾಂಡ್ಯ ಕೂಡ ಸಮರ್ಥ ಬೆಂಬಲ ಒದಗಿಸುತ್ತಿದ್ದಾರೆ. ಇದರ ನಡುವೆ ನಾಯಕ ರೋಹಿತ್ ಶರ್ಮ ನೆಟ್ಸ್ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿರುವುದು ಕುತೂಹಲ ಕೆರಳಿಸಿದೆ.
ಆರಂಭ: ಮಧ್ಯಾಹ್ನ 2.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ
ಏಕದಿನ ಮುಖಾಮುಖಿ: 40
ಭಾರತ: 31
ಬಾಂಗ್ಲಾದೇಶ: 8
ರದ್ದು: 1
ವಿಶ್ವಕಪ್ ಮುಖಾಮುಖಿ: 4
ಭಾರತ: 3
ಬಾಂಗ್ಲಾದೇಶ: 1
*25: ಬಾಂಗ್ಲಾದೇಶ ತಂಡ ಭಾರತದಲ್ಲಿ 25 ವರ್ಷಗಳ ಬಳಿಕ ಏಕದಿನ ಪಂದ್ಯ ಆಡಲಿದೆ. 1998ರ ಕೋಕಕೋಲ ತ್ರಿಕೋನ ಸರಣಿಯಲ್ಲಿ ಕೊನೆಯದಾಗಿ ಮುಂಬೈನ ವಾಂಖೆಡೆಯಲ್ಲಿ ಉಭಯ ತಂಡಗಳು ಮುಖಾಮುಖಿ ಆಗಿದ್ದವು.
*3: ರೋಹಿತ್ ಶರ್ಮ ಬಾಂಗ್ಲಾ ಎದುರು ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಶತಕ ಸಿಡಿಸುವ ಅವಕಾಶ ಹೊಂದಿದ್ದಾರೆ. 2015ರ ಕ್ವಾರ್ಟರ್ೈನಲ್ ಮತ್ತು 2019ರ ಲೀಗ್ ಮುಖಾಮುಖಿಯಲ್ಲಿ ರೋಹಿತ್ ಶತಕ ಸಿಡಿಸಿದ್ದರು.
*ವಿಶ್ವಕಪ್ನಂಥ ವೇದಿಕೆಯಲ್ಲಿ ಪ್ರತಿ ತಂಡವೂ ಸವಾಲೊಡ್ಡಬಹುದು. ಹೀಗಾಗಿ ಯಾವುದೇ ತಂಡವನ್ನು ಲುವಾಗಿ ಪರಿಗಣಿಸಲು ಸಾಧ್ಯವಿಲ್ಲ.
| ಪರಾಸ್ ಮಹಾಂಬ್ರೆ, ಭಾರತ ತಂಡದ ಬೌಲಿಂಗ್ ಕೋಚ್