ಪ್ರಶಸ್ತಿ ಸುತ್ತಿಗೇರಿದ ಭಾರತ ಲೆಜೆಂಡ್ಸ್ ; ಸಚಿನ್ ಬಳಗಕ್ಕೆ ವಿಂಡೀಸ್ ಎದುರು 12 ರನ್ ಜಯ

india legends for web
Published on

ರಾಯ್‌ಪುರ: ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾದ ಹೋರಾಟದಲ್ಲಿ ಅಂತಿಮ ಹಂತದಲ್ಲಿ ಮೇಲುಗೈ ಸಾಧಿಸಿದ ಭಾರತ ಲೆಜೆಂಡ್ಸ್ ತಂಡ ‘ರಸ್ತೆ ಸುರಕ್ಷತಾ ವರ್ಲ್ಡ್ ಸಿರೀಸ್’ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿತು. ಶಾಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಸಾರಥ್ಯದ ತಂಡ 12 ರನ್‌ಗಳಿಂದ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡದ ಎದುರು ರೋಚಕ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಸಚಿನ್ ತೆಂಡುಲ್ಕರ್ (65ರನ್, 42 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಯುವರಾಜ್ ಸಿಂಗ್ (49*ರನ್, 20 ಎಸೆತ, 1 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ 3 ವಿಕೆಟ್‌ಗೆ 218 ರನ್ ಪೇರಿಸಿತು. ಪ್ರತಿಯಾಗಿ ಡ್ವೈನ್ ಸ್ಮಿತ್ (63ರನ್, 36 ಎಸೆತ, 9 ಬೌಂಡರಿ, 2 ಸಿಕ್ಸರ್), ನರಸಿಂಗ್ ದೇವ ನಾರಾಯಣ್ (59ರನ್, 44 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಬ್ರಿಯಾನ್ ಲಾರಾ (46ರನ್, 28 ಎಸೆತ, 4 ಬೌಂಡರಿ, 2 ಸಿಕ್ಸರ್) ತ್ರಿಮೂರ್ತಿಗಳ ಪ್ರತಿಹೋರಾಟದ ನಡುವೆಯೂ ವಿಂಡೀಸ್ 6 ವಿಕೆಟ್‌ಗೆ 206 ರನ್‌ಗಳಿಸಲಷ್ಟೇ ಶಕ್ತವಾಯಿತು.

ಭಾರತ ಲೆಜೆಂಡ್ಸ್: 3 ವಿಕೆಟ್‌ಗೆ 218 (ವೀರೇಂದ್ರ ಸೆಹ್ವಾಗ್ 35, ಸಚಿನ್ ತೆಂಡುಲ್ಕರ್ 65, ಮೊಹಮದ್ ಕೈಫ್ 27, ಯೂಸಿಫ್ ಪಠಾಣ್ 37*, ಯುವರಾಜ್ ಸಿಂಗ್ 49*, ಟಿನೊ ಬೆಸ್ಟ್ 25ಕ್ಕೆ 2, ರ‌್ಯಾನ್ ಅಸ್ಟಿನ್ 38ಕ್ಕೆ 1). ವೆಸ್ಟ್ ಇಂಡೀಸ್ : 6 ವಿಕೆಟ್‌ಗೆ 206 (ಡ್ವೈನ್ ಸ್ಮಿತ್ 63, ನರಸಿಂಗ್ ದೇವನಾರಾಯಣ್ 59, ಬ್ರಿಯಾನ್ ಲಾರಾ 46, ವಿನಯ್ ಕುಮಾರ್ 26ಕ್ಕೆ 2, ಇರ್ಫಾನ್  ಪಠಾಣ್ 48ಕ್ಕೆ 1, ಪ್ರಜ್ಞಾನ್ ಓಜಾ 24ಕ್ಕೆ 1, ಗೂನಿ 35ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net