ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌; ಐತಿಹಾಸಿಕ ಸಾಧನೆ ಸನಿಹದಲ್ಲಿ ಕನ್ನಡತಿ ಅರ್ಚನಾ ಕಾಮತ್

World Table Tennis Championships TT for web
Published on

ಹೌಸ್ಟನ್ (ಯುಎಸ್‌ಎ): ಕರ್ನಾಟಕದ ಅರ್ಚನಾ ಕಾಮತ್ ಹಾಗೂ ಸ್ಟಾರ್ ಆಟಗಾರ್ತಿ ಮನಿಕಾ ಬಾತ್ರಾ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಎಂಟರಘಟ್ಟಕ್ಕೇರಿದ್ದಾರೆ. ಮನಿಕಾ ಬಾತ್ರಾ, ಜಿ.ಸತ್ಯನ್ ಜತೆಗೂಡಿ ಮಿಶ್ರ ಡಬಲ್ಸ್ ವಿಭಾಗದಲ್ಲೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮನಿಕಾ ಹಾಗೂ ಅರ್ಚನಾ ಕಾಮತ್ ಜೋಡಿ ಶುಕ್ರವಾರ ನಡೆದ ಪ್ರಿಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 11-4, 11-9, 6-11, 11-7 ರಿಂದ ಹಂಗೆರಿಯ ಡೊರಾ ಮದರಾಜ್ ಹಾಗೂ ಜಾರ್ಗಿನಾ ಪೊಟಾ ಜೋಡಿಯನ್ನು ಸೋಲಿಸಿತು. ಕನಿಷ್ಠ ಸೆಮಿಫೈನಲ್ ಪ್ರವೇಶಿಸಿದರೂ ಈ ಜೋಡಿ ಪದಕ ಖಚಿತಪಡಿಸಿಕೊಳ್ಳಲಿದೆ. ಸೆಮಿಫೈನಲ್‌ನಲ್ಲಿ ಸೋತರೂ ಕಂಚಿನ ಪದಕ ದಕ್ಕಲಿದೆ.

ಮಿಶ್ರ ಡಬಲ್ಸ್ ವಿಭಾಗದ ಮತ್ತೊಂದು ಹಣಾಹಣಿಯಲ್ಲಿ ಮನಿಕಾ ಬಾತ್ರಾ ಹಾಗೂ ಜಿ.ಸತ್ಯನ್ ಜೋಡಿ 15-17, 10-12, 12-10, 11-6, 11-7 ರಿಂದ ಜಪಾನ್‌ನ ಹರಿಮೊಟೊ ಟೊಮೊಕಾಜು ಹಾಗೂ ಹಯತ ಹಿನಾ ಜೋಡಿಯನ್ನು ಸೋಲಿಸಿತು. ಮಿಶ್ರ ಡಬಲ್ಸ್ ವಿಭಾಗದ ಮತ್ತೊಂದು ಪ್ರೀಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಅರ್ಚನಾ ಹಾಗೂ ಶರತ್ ಕಮಾಲ್ ಜೋಡಿ ಪ್ರೀಕ್ವಾರ್ಟರ್ ಫೈನಲ್‌ನಲ್ಲೇ ಮುಗ್ಗರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net