

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಸ್ಫೋಟಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಕೇವಲ ಮೂರು ರನ್‌ಗಳಿಂದ ತ್ರಿಶತಕ ವಂಚಿತರಾಗಿದ್ದಾರೆ. ಜತೆಗೆ ಅಪ್ಪನ ವೈಯಕ್ತಿಕ ಗರಿಷ್ಠ ಟೆಸ್ಟ್ ಮೊತ್ತವನ್ನು ಹಿಂದಿಕ್ಕುವ ಅವಕಾಶ ಹಾಗೂ ಫೆರಾರಿ ಕಾರು ಉಡುಗೊರೆಯಾಗಿ ಪಡೆಯುವ ಅವಕಾಶವೂ ಆರ್ಯವೀರ್‌ಗೆ ತಪ್ಪಿದೆ!.
ಅಪ್ಪ ಸೆಹ್ವಾಗ್ ಅವರಂತೆ ಆಕ್ರಮಣಕಾರಿ ಶೈಲಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಆರ್ಯವೀರ್, ಶಿಲ್ಲಾಂಗ್‌ಲ್ಲಿ ನಡೆಯುತ್ತಿರುವ 19 ವಯೋಮಿತಿಯ ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಇನಿಂಗ್ಸ್ ಆರಂಭಿಸಿದರು. 17 ವರ್ಷದ ಆರ್ಯವೀರ್ ಮೊದಲ ಇನಿಂಗ್ಸ್‌ನಲ್ಲಿ ತಾನೆದುರಿಸಿದ 309 ಎಸೆತಗಳಲ್ಲಿ 51 ಬೌಂಂಡರಿ ಹಾಗೂ 3 ಸಿಕ್ಸರ್ ಸಹಿತ 297 ರನ್ ಕಲೆಹಾಕಿದರು. ಇದರ ಲವಾಗಿ ದೆಹಲಿ ತಂಡ 5 ವಿಕೆಟ್‌ಗೆ 623 ರನ್‌ಗಳಿಗೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ದೆಹಲಿ ಇನಿಂಗ್ಸ್ ಮುಕ್ತಾಯದ ಬೆನ್ನಲ್ಲೇ ಆರ್ಯವೀರ್ ಭಾವಚಿತ್ರದ ಜತೆಗೆ ತಂಡದ ಸ್ಕೋರ್ ಕಾರ್ಡ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಸೆಹ್ವಾಗ್, ‘ಉತ್ತಮವಾಗಿ ಆಡಿದೆ ಆರ್ಯವೀರ್ ಸೆಹ್ವಾಗ್. 23 ರನ್‌ಗಳಿಂದ ೆರಾರಿಯನ್ನು ತಪ್ಪಿಸಿಕೊಂಡಿರುವೆ. ಆದರೆ ಅದ್ಭುತವಾಗಿ ಬ್ಯಾಟಿಂಗ್ ನಡೆಸಿದೆ. ನಿನ್ನಲ್ಲಿರುವ ಛಲವನ್ನು ಜೀವಂತವಾಗಿರಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ದ್ವಿಶತಕ, ತ್ರಿಶತಕ ಬಾರಿಸು’ ಎಂದು ತಿಳಿ ಹಾಸ್ಯದ ಮೂಲಕ ಮಗನ ಸಾಧನೆಯನ್ನು ಬಣ್ಣಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕ ಸಿಡಿಸಿರುವ ವೀರೇಂದ್ರ ಸೆಹ್ವಾಗ್, 2015ರ ಖಾಸಗಿ ಕಾರ್ಯಕ್ರಮವೊಂದರಲ್ಲಿ ‘ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಲ ದೊಡ್ಡ ಸ್ಕೋರ್‌ಗಳನ್ನು ಗಳಿಸಿದ್ದೇನೆ ಎಂಬುದು ನನ್ನ ಮಕ್ಕಳಿಗೆ ತಿಳಿದಿದೆ. ಹಾಗಾಗಿ ನನ್ನ ಮಕ್ಕಳು ಶಾಲಾ ಕ್ರೀಡಾಕೂಟ ಸೇರಿ ಯಾವುದೇ ಕ್ರಿಕೆಟ್ ಟೂರ್ನಿಯಲ್ಲಿ ತನ್ನ ವೈಯಕ್ತಿಕ ಶ್ರೇಷ್ಠ 319 ರನ್‌ಗಳ ದಾಖಲೆಯನ್ನು ಮುರಿದರೆ, ನಾನು ನಿಮಗೆ ಫೆರಾರಿ ನೀಡುತ್ತೇನೆ ಎಂಬ ಭರವಸೆಯನ್ನು ಅವರಿಗೆ ನೀಡಿದ್ದೇನೆ’ ಎಂದು ಹೇಳಿಕೊಂಡಿದ್ದರು.