

ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ ಭಾರತ ತಂಡಕ್ಕೆ ಐಸಿಸಿ ಪೆಟ್ಟು ನೀಡಿದೆ. ನಿಧಾನಗತಿಯ ಓವರ್‌ಗಾಗಿ ಭಾರತ ತಂಡದ ಆಟಗಾರರ ಪಂದ್ಯ ಸಂಭಾವನೆಯ ಶೇ. 20 ದಂಡ ವಿಧಿಸಲಾಗಿದೆ. ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ 1 ಅಂಕ ಕಡಿತಗೊಳಿಸಲಾಗಿದೆ.
ವಿರಾಟ್ ಕೊಹ್ಲಿ ಬಳಗ ನಿಗದಿತ ಸಮಯದ ವೇಳೆ 1 ಓವರ್ ಹಿಂದುಳಿದಿದ್ದ ಕಾರಣಕ್ಕಾಗಿ ಐಸಿಸಿ ಮ್ಯಾಚ್ ರೆಫ್ರಿ ಆಂಡ್ರೋ ಪೇಕ್ರ್‌ಟಾ ಈ ಶಿಕ್ಷೆ ವಿಧಿಸಿದ್ದಾರೆ. ಡಬ್ಲ್ಯುಟಿಸಿಯಲ್ಲಿ ಈಗ ಭಾರತದ ಒಟ್ಟು ಅಂಕ 53ಕ್ಕೆ ಇಳಿದಿದ್ದು, ಶೇ. 63.09 ಅಂಕದೊಂದಿಗೆ 4ನೇ ಸ್ಥಾನ ಕಾಯ್ದುಕೊಂಡಿದೆ.
ದಕ್ಷಿಣ ಆಫ್ರಿಕಾವನ್ನು 113 ರನ್‌ಗಳಿಂದ ಮಣಿಸುವ ಮೂಲಕ ಭಾರತ ತಂಡ ಗುರುವಾರ, ಸೆಂಚುರಿಯನ್‌ನಲ್ಲಿ ಟೆಸ್ಟ್ ಗೆದ್ದ ಏಷ್ಯಾದ ಮೊದಲ ತಂಡ ಎನಿಸಿತ್ತು. ಈ ಮುನ್ನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಭಾರತಕ್ಕೆ ನಿಧಾನಗತಿ ಓವರ್‌ಗೆ 2 ಅಂಕ ಕಡಿತ ಎದುರಾಗಿತ್ತು.