ಕಿವೀಸ್​ಗೆ ತಿರುಗೇಟು ನೀಡಲು ಭಾರತ ಸಜ್ಜು : ಇಂದಿನಿಂದ ಪುಣೆಯಲ್ಲಿ ಎರಡನೇ ಟೆಸ್ಟ್​

New Project
Published on

ಪುಣೆ: ತವರಿನ ಅಂಗಣದಲ್ಲಿ ಬರೋಬ್ಬರಿ 36 ವರ್ಷಗಳ ಬಳಿಕ ನ್ಯೂಜಿಲೆಂಡ್​ ಎದುರು ಟೆಸ್ಟ್​ ಕ್ರಿಕೆಟ್​ನಲ್ಲಿ ಸೋಲು ಅನುಭವಿಸಿರುವ ಟೀಮ್​ ಇಂಡಿಯಾ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಇದರಿಂದಾಗಿ ಗುರುವಾರ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್​ಗೆ ತಿರುಗೇಟು ನೀಡಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಭಾರತ ತಂಡ ಪುಟಿದೇಳುವ ಹಂಬಲದಲ್ಲಿದೆ. ಎಂದಿನ ಸ್ಪಿನ್​ ಕಾರ್ಯತಂತ್ರದ ಮೂಲಕ ಸರಣಿ ಜೀವಂತವಿರಿಸರುವತ್ತ ರೋಹಿತ್​ ಶರ್ಮ ಪಡೆ ಗಮನಹರಿಸಿದೆ.

ಪ್ರಮುಖ ಆಟಗಾರರ ಲಭ್ಯತೆಯ ನಡುವೆಯೂ ಕನಿಷ್ಠ ಮೊತ್ತಕ್ಕೆ ಆಲೌಟ್​ ಆಗಿ ತವರಿನಲ್ಲಿ ಬ್ಯಾಟಿಂಗ್​ ವೈಲ್ಯ ಕಂಡಿರುವ ಟೀಮ್​ ಇಂಡಿಯಾಗೆ ಸರಣಿ ಜೀವಂತವಿರಿಸಲು ಗೆಲುವು ಅನಿವಾರ್ಯ. ಹಾಲಿ ವರ್ಷ ಎರಡನೇ ಬಾರಿಗೆ ಟೆಸ್ಟ್​ನಲ್ಲಿ, ಅದರಲ್ಲೂ ತವರಿನಲ್ಲಿ ಸೋಲು ಅನುಭವಿಸಿರುವುದು ರೋಹಿತ್​ಗೆ ಹಿನ್ನಡೆ ಎನಿಸಿದೆ. ಭಾರತ ಯುವ ಆಟಗಾರರಿಂದ, ಅದರಲ್ಲೂ ಪ್ರಮುಖವಾಗಿ ಬೌಲಿಂಗ್​ ವಿಭಾಗದಲ್ಲಿ ಉತ್ತಮ ನಿರ್ವಹಣೆಯನ್ನು ನಿರೀಸುತ್ತಿದೆ.

ಹಾಲಿ ವರ್ಷದಲ್ಲಿ ಇಂಗ್ಲೆಂಡ್​ ಎದುರು ಮೊದಲ ಟೆಸ್ಟ್​ ಪಂದ್ಯ ಸೋತ ಬಳಿಕ ನಂತರದ 4 ಟೆಸ್ಟ್​ಗಳಲ್ಲೂ ಗೆದ್ದು ಸರಣಿ ವಶಪಡಿಸಿಕೊಂಡಿದ್ದ ರೋಹಿತ್​ ಪಡೆ, ಈ ಸಲವೂ ಅದೇ ರೀತಿ ತಿರುಗೇಟು ನೀಡುವ ಛಲದಲ್ಲಿದೆ. ಆದರೆ ಭಾರತಿಯ ಸ್ಪಿನ್ನರ್​ಗಳ ಎದುರು ಕಿವೀಸ್​ ಬ್ಯಾಟರ್​ಗಳು ದಿಟ್ಟ ಪ್ರದರ್ಶನ ನೀಡುತ್ತಿರುವುದು ಟೀಮ್​ ಇಂಡಿಯಾಗೆ ಹಿನ್ನಡೆ ಎನಿಸಿದೆ. ರಚಿನ್​ ರವೀಂದ್ರ, ಡೆವೋನ್​ ಕಾನ್​ ವೇ, ಡೆರಿಲ್​ ಮಿಚೆಲ್​ ಸ್ಪಿನ್ನರ್​ಗಳ ಎದುರು ಉತ್ತಮ ದಾಖಲೆ ಹೊಂದಿದ್ದಾರೆ.

ಬೆಂಗಳೂರು ಟೆಸ್ಟ್​ನಲ್ಲಿ ಸ್ಪಿನ್ನರ್​ಗಳ ಎದುರು ಸ್ವೀಪ್​&ರಿವರ್ಸ್​ ಸ್ವೀಪ್​ ಮೂಲಕ ಅವಕಾಶ ಸಿಕ್ಕಾಗಲೆಲ್ಲ ರನ್​ ಕಸಿಯುವ ತಂತ್ರದಿಂದ ಯಶ ಸಾಧಿಸಿದೆ. ವಿರಾಟ್​ ಕೊಹ್ಲಿ, ಸ್ರಾರ್ಜ್​ ಖಾನ್​ ಹಾಗೂ ರಿಷಭ್​ ಪಂತ್​ ಉತ್ತಮ ಲಯದಲ್ಲಿದ್ದು, ರೋಹಿತ್​ ಜತೆಗೆ ಕೆಎಲ್​ ರಾಹುಲ್​ ಾಮ್​ರ್ ಕಂಡುಕೊಂಡರೆ ಭಾರತಕ್ಕೆ ಹೆಚ್ಚಿನ ಬಲ ಸಿಗಲಿದೆ.

ಆಸೀಸ್​ ಪ್ರವಾಸಕ್ಕೆ ಮುನ್ನ ಕಿವೀಸ್​ ಎದುರಿನ 2 ಟೆಸ್ಟ್​ ಜಯಿಸುವುದು ರೋಹಿತ್​ ಪಡೆಯ ಮುಂದಿರುವ ಪ್ರಮುಖ ಸವಾಲಾಗಿದೆ. 2ನೇ ಟೆಸ್ಟ್​ಗೆ ಭಾರತ ತಂಡ ಆಡುವ ಬಳಗ ಆಯ್ಕೆ ಕಗ್ಗಂಟ್ಟಾಗಿದೆ. ವಿರಾಟ್​ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನ ವೈಯಕ್ತಿಕ ಗರಿಷ್ಠ ಮೊತ್ತ 254 ರನ್​ ಇದೇ ಮೈದಾನದಲ್ಲಿ ದಾಖಲಿಸಿದ್ದಾರೆ. ಮೊದಲ ಟೆಸ್ಟ್​ ಪಂದ್ಯದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ನ್ಯೂಜಿಲೆಂಡ್​ ಪಂದ್ಯ ಬಾಕಿಯಿರುವಂತೆಯೆ ಐತಿಹಾಸಿಕ ಸರಣಿ ಜಯಿಸುವ ಗುರಿ ಹೊಂದಿದೆ.

ರಾಹುಲ್​ ವರ್ಸಸ್​ ಸರ್ಪ್ರಾಜ್​: ಮೊದಲ ಟೆಸ್ಟ್​ ಪಂದ್ಯ ತಪ್ಪಿಸಿಕೊಂಡಿದ್ದ ಬ್ಯಾಟರ್​ ಶುಭಮಾನ್​ ಗಿಲ್​ ಹಾಗೂ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ವಿಕೆಟ್​ ಕೀಪರ್​&ಬ್ಯಾಟರ್​ ರಿಷಭ್​ ಪಂತ್​ 2ನೇ ಟೆಸ್ಟ್​ಗೆ ಫಿಟ್​ ಆಗಿರುವುದಾಗಿ ಕೋಚ್​ ಗೌತಮ್​ ಗಂಭೀರ್​ ಖಾತ್ರಿಪಡಿಸಿದ್ದಾರೆ. ಜತೆಗೆ ಪಂತ್​ ವಿಕೆಟ್​ ಕೀಪಿಂಗ್​ ನಿರ್ವಹಣೆಯ ಜವಾಬ್ದಾರಿಯೂ ಹೊರಲಿದ್ದಾರೆ ಎಂದು ತಿಳಿಸಿದ್ದಾರೆ. ಗಿಲ್​ ವಾಪಸಾತಿ ಹಿನ್ನಲೆ ಸ್ರಾರ್ಜ್​ ಅಥವಾ ಕೆಎಲ್​ ರಾಹುಲ್​ ಸ್ಥಾಬ ಬಿಟ್ಟುಕೊಡಬೇಕಾಗುತ್ತದೆ. ತವರಿನ ಅಂಗಣದಲ್ಲಿ ರಾಹುಲ್​ ವೈಲ್ಯ ಅನುಭವಿಸಿದ ಹಿನ್ನಡೆ ಎದುರಿಸಿದರೆ, ಸ್ರಾರ್ಜ್​ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಸ್ಥಾನ ಗಟ್ಟಿಮಾಡಿಕೊಂಡಿದ್ದಾರೆ. ಸರಣಿಯಲ್ಲಿ ಹಿನ್ನಡೆಯ ನಡುವೆ ಅನುಭವಿ ರಾಹುಲ್​ಗೆ ಮಣೆ ಹಾಕಿದರೆ, ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ ನಡುವೆಯೂ ಸ್ರಾರ್ಜ್​ ಸ್ಥಾನ ಕಳೆದುಕೊಳ್ಳಲಿದ್ದಾರೆ.

ಟೀಮ್​ ನ್ಯೂಸ್​

ಭಾರತ: ಶುಭಮಾನ್​ ಗಿಲ್​ ಫಿಟ್​ ಆಗಿರುವುದರಿಂದ ಭಾರತವೂ ಕೆಲ ಬದಲಾವಣೆ ಮಾಡುವುದು ಖಚಿತವೆನಿಸಿದೆ. ಗಿಲ್​ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದರೆ, ಕೊಹ್ಲಿ ನಂತರದಲ್ಲಿ ಕ್ರೀಸ್​ಗಿಳಿಯಲಿದ್ದಾರೆ. ರಾಹುಲ್​ ಮತ್ತು ಸ್ರಾರ್ಜ್​ ಖಾನ್​ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಕುಲದೀಪ್​ ಯಾದವ್​ ಬದಲಿಗೆ ವಾಷಿಂಗ್ಟನ್​ ಸುಂದರ್​ ಸ್ಥಾನ ಪಡೆದರೂ ಅಚ್ಚರಿ ಇಲ್ಲ. ಇನ್ನು 2ನೇ ವೇಗಿ ಮೊಹಮದ್​ ಸಿರಾಜ್​ ಬದಲಿಗೆ ಆಕಾಶ್​ದೀಪ್​ಗೆ ಸ್ಥಾನ ನಿರೀಸಲಾಗಿದೆ.

ನ್ಯೂಜಿಲೆಂಡ್​: ಗೆಲುವಿನ ಕಾಂಬಿನೇಷನ್​ನಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಕೇನ್​ವಿಲಿಯಮ್ಸನ್​ ಗೈರಿನಲ್ಲಿ ವಿಲ್​ ಯಂಗ್​ ಮುಂದುವರಿಯಲಿದ್ದು, ಮೂವರು ವೇಗಿಗಳ ಜತೆಗೆ ಕಣಕ್ಕಿಳಿಯುವ ನಿರೀೆಗಳಿವೆ.ಪುಣೆ ಪಿಚ್​ ಸ್ಪಿನ್ನರ್​ಗಳಿಗೆ ಹೆಚ್ಚಿನ ನೆರವು ಒದಗಿಸುವುದರಿಂದ ಹೆಚ್ಚುವರಿ ಸ್ಪಿನ್ನರ್​ ಕಣಕ್ಕಿಳಿದರೂ ಅಚ್ಚರಿ ಇಲ್ಲ.

ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಸ್ಪೋರ್ಟ್ಸ್​18, ಜಿಯೋಸಿನಿಮಾ

ಪಿಚ್​ ರಿಪೋರ್ಟ್​

ಎಂಸಿಎ ಕ್ರೀಡಾಂಣ ಇದುವರೆಗೆ 3 ಟೆಸ್ಟ್​ ಪಂದ್ಯಗಳಿಗೆ ಆತಿಥ್ಯವಹಿಸಿದ್ದು, ಈ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆಲುವು ದಾಖಲಿಸಿದೆ. 2019ರಲ್ಲಿ ಭಾರತ ಇಲ್ಲಿ ಕೊನೆಯದಾಗಿ ದ.ಆಫ್ರಿಕಾ ವಿರುದ್ಧಆಡಿತ್ತು. ಆಗ ಟೀಮ್​ ಇಂಡಿಯಾ ಇನಿಂಗ್ಸ್​ ಹಾಗೂ 137 ರನ್​ಗಳಿಂದ ಗೆದ್ದು ಬೀಗಿತ್ತು. ಈ ಸಲದ ಪಿಚ್​ ಸ್ಪಿನ್​ ಸ್ನೇಹಿಯಾಗಿರುವ ನಡುವೆ ಬ್ಯಾಟಿಂಗ್​ಗೂ ಸಹಕರಿಸುವ ನಿರೀೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net