

ಬೆಂಗಳೂರು: ಟಿ20 ಸರಣಿ ಗೆಲುವಿನೊಂದಿಗೆ ಏಕದಿನ ವಿಶ್ವಕಪ್ ೈನಲ್ ಸೋಲಿನ ನೋವನ್ನು ಸ್ವಲ್ಪಮಟ್ಟಿಗೆ ತಗ್ಗಿಸಿಕೊಂಡಿರುವ ಭಾರತ ತಂಡ, ಗೆಲುವಿನ ಓಟ ಮುಂದುವರಿಸುವ ಮೂಲಕ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ತವಕದಲ್ಲಿದೆ. ಸೂರ್ಯಕುಮಾರ್ ಯಾದವ್ ಸಾರಥ್ಯದ ಯುವ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ 5ನೇ ಹಾಗೂ ಅಂತಿಮ ಪಂದ್ಯವನ್ನು ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದ್ದು, ಸರಣಿ ಗೆಲುವಿನ ಅಂತರ ವಿಸ್ತರಿಸುವ ತವಕದಲ್ಲಿದೆ. ಜತೆಗೆ, ಟೀಮ್ ಇಂಡಿಯಾ ತವರಿನಲ್ಲಿ 2023ರ ಕೊನೇ ಪಂದ್ಯವನ್ನು ಗೆಲುವಿನೊಂದಿಗೆ ಸಂಭ್ರಮಿಸುವ ಹಂಬಲದಲ್ಲಿದೆ.
ಪಿಚ್ ರಿಪೋರ್ಟ್
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರನ್‌ಮಳೆಗೆ ಸಾಕ್ಷಿಯಾಗಿದ್ದ ಬೆಂಗಳೂರಿನ ಚಿನ್ನಸ್ವಾಮಿ ಅಂಗಣ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡಲಿದ್ದು, ಹೆಚ್ಚಿನ ರನ್ ನಿರೀಕ್ಷಿಸಬಹುದು. ಯಾವುದೇ ಮೊತ್ತ ರಕ್ಷಿಸಿಕೊಳ್ಳುವುದು ಬೌಲರ್‌ಗಳಿಗೆ ಸವಾಲೆನಿಸಲಿದೆ. ಜತೆಗೆ ಇಬ್ಬನಿಯ ಸಮಸ್ಯೆಯೂ ಕಾಡಲಿದೆ.
ಮಳೆ ಭೀತಿ?
ಕಳೆದ ಎರಡು ದಿನಗಳಿಂದ ಉದ್ಯಾನನಗರಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಪಂದ್ಯಕ್ಕೆ ಮಳೆ ಅಡಚಣೆ ತರುವ ಸಾಧ್ಯತೆಯೂ ಇದೆ. ಮಳೆ ಅಡ್ಡಿಯಾದರೂ ಪಂದ್ಯ ರದ್ದಾಗುವ ಸಾಧ್ಯತೆ ವಿರಳ.
ಪಂದ್ಯ ಆರಂಭ: ರಾತ್ರಿ 7
ನೇರಪ್ರಸಾರ: ಸ್ಪೋಟ್ಸ್ 18, ಜಿಯೋ ಸಿನಿಮಾ.