ಬೆಂಗಳೂರು: ಭಾರತ ತಂಡ ಮಹಿಳೆಯರ ಕಬಡ್ಡಿ ವಿಶ್ವಕಪ್ (kabaddi world cup) ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ನಡೆದ ತನ್ನ 4ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಉಗಾಂಡ ವಿರುದ್ಧ 51-16 ಅಂಕಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಭಾರತ ತಂಡ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು.
ಈ ಮುನ್ನ ಥಾಯ್ಲೆಂಡ್, ಬಾಂಗ್ಲಾದೇಶ, ಜರ್ಮನಿ ವಿರುದ್ಧ ಭಾರತ ಜಯಿಸಿತ್ತು. ಶನಿವಾರ ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ ಭಾರತ ತಂಡ ಬಿ ಗುಂಪಿನ 2ನೇ ಸ್ಥಾನಿ ತಂಡವನ್ನು ಎದುರಿಸಲಿದೆ.