

ರಾಯಪುರ: ನ್ಯೂಜಿಲೆಂಡ್ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ದುಕೊಂಡಿತು. ನಾಯಕ ರೋಹಿತ್ ಶರ್ಮಾನ ಲೆಕ್ಕಾಚಾರ ಫಲಿಸಿದ್ದು, ಭಾರತೀಯ ಬೌಲರ್ಗಳ ಪ್ರವಾಸಿ ತಂಡವನ್ನ ಅಲ್ಪಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ನಲುಗಿದ
ನ್ಯೂಜಿಲೆಂಡ್ 108 ರನ್ ಗಳಿಸಲಷ್ಟೇ ಶಕ್ತವಾಯಿತು.
ನ್ಯೂಜಿಲೆಂಡ್ ನೀಡಿದ ಅಲ್ಪ ಮೊತ್ತದ ಗುರಿಯನ್ನು ಕೇವಲ 20.1 ಓವರ್ಗಳಲ್ಲಿ ತಲುಪುವಲ್ಲಿ ಸಾಧ್ಯವಾಯಿತು. ನಾಯಕ್ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್ಗೆ ಈ ಜೋಡಿ 72 ರನ್ಗಳ ಜೊತೆಯಾಟವಾಡಿತು. ರೋಹಿತ್ ಶರ್ಮಾ 51 ರನ್ ಗಳಿಸಿ ಮಿಂಚಿದರು. ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಮುಂದಾದ ರೋಹಿತ್ ಅರ್ಧಶತಕ ಸಿಡಿಸುತ್ತಿದ್ದಂತೆ ವಿಕೆಟ್ ಒಪ್ಪಿಸಿದರು.
ಎರಡನೇ ವಿಕೆಟ್ಗೆ ಶುಭಮನ್ ಗಿಲ್ ಜತೆಯಾದ ವಿರಾಟ್ ಕೊಹ್ಲಿ 11 ರನ್ಗಳಿಸಿ ಸ್ಯಾಂಟ್ನರ್ ಎಸೆತದಲ್ಲಿ ಸ್ಟಂಪ್ ಔಟಾದರು. ಅಂತಿಮವಾಗಿ ಇಶಾನ್ ಕಿಶನ್ ಜತೆಗೂಡಿದ ಗಿಲ್ ಅಜೇಯ 40 ರನ್ ಬಾರಿಸಿ ಟೀಂ ಇಂಡಿಯಾ ಸರಣಿಯಲ್ಲಿ ಎರಡನೇ ಗೆಲುವು ದಾಖಲಿಸಲು ನೆರವಾದರು. ಇದರೊಂದಿಗೆ ಭಾರತ ತಂಡ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ಕಿವೀಸ್ ವಿರುದ್ಧ ಟೀಂ ಇಂಡಿಯಾ ಬೌಲರ್ಗಳು ಅಧ್ಭುತವಾಗಿ ಬೌಲಿಂಗ್ ದಾಳಿ ನಡೆಸಿದರು. ಯಾವೊಬ್ಬ ಬ್ಯಾಟ್ಸ್ಮನ್ಗೂ ಕ್ರಿಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅವಕಾಶ ಮಾಡಿ ಕೊಡಲಿಲ್ಲ. ಏಳು ಬ್ಯಾಟ್ಸ್ಮನ್ಗಳು ಒಂದಕಿಂಯ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಸ್ಯಾಂಟ್ನರ್ (27), ಗ್ಲೆನ್ ಫಿಲಿಪ್ಸ್ (36), ಮಿಚೆಲ್ ಬ್ರೇಸ್ವೆಲ್ (22) ರನ್ ಗಳಿಸಿರು. ಮಧ್ಯಮ ಕ್ರಮಾಂಕದಲ್ಲಿ ಸ್ಯಾಂಟ್ನರ್ ಹಾಗೂ ಗ್ಲೆನ್ ಫಿಲಿಪ್ಸ್ 47 ರನ್ಗಳ ಜೊತೆಯಾಟದ ನರವಿನಿಂದ ನ್ಯೂಜಿಲೆಂಡ್ ಮೊತ್ತವು 100ರ ಗಡಿದಾಟಲು ಸಾಧ್ಯವಾಯಿತು. (ಏಜೆನ್ಸೀಸ್)