

ನವದೆಹಲಿ: ಕರೊನಾದ ಒಮಿಕ್ರಾನ್ ರೂಪಾಂತರಿಯ ಆತಂಕದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ಪ್ರಶ್ನೆಗಳಿಗೆ ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಉತ್ತರ ನೀಡಿದೆ.
ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಮೂರು ಟೆಸ್ಟ್ ಮ್ಯಾಚ್ಗಳನ್ನು ಮತ್ತು ಮೂರು ಏಕದಿನ(ODI) ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಪ್ರಕಟಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೂಲತಃ ಪ್ರವಾಸದ ಭಾಗವಾಗಿದ್ದ ನಾಲ್ಕು ಟಿ20 ಇನ್ನಿಂಗ್ಸ್ಗಳನ್ನು ನಂತರದ ದಿನಗಳಲ್ಲಿ ಆಡಲಾಗುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)