ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಕೊರಿಯಾ ಎದುರು ಭರ್ಜರಿ ಗೆಲುವು ಸಾಧಿಸಿದ ಭಾರತ ಕಿರಿಯ ಮಹಿಳಾ ಹಾಕಿ ತಂಡ

New-Project-14
Published on

ಸ್ಯಾನ್‌ಟಿಯಾಗೋ: ಆರಂಭಿಕ ಹಿನ್ನಡೆಯಿಂದ ಕಂಬ್ಯಾಕ್ ಮಾಡಿದ ಭಾರತ ಹಾಕಿ ತಂಡ ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್‌ನ ಕ್ರಾಸ್ ಓವರ್ ಪಂದ್ಯದಲ್ಲಿ ಕೊರಿಯಾ ಎದುರು 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ.

ಶುಕ್ರವಾರ ನಡೆದ 9-12ನೇ ಸ್ಥಾನಕ್ಕೆ ನಡೆದ ಹೋರಾಟದಲ್ಲಿ ಭಾರತದ ಪರ ರೂಪಾನಿ ಕುಮಾರಿ(23), ಮುಮ್ತಾಜ್ ಖಾನ್ (44) ಹಾಗೂ ಅನ್ನು (46) ತಲಾ ಒಂದು ಗೋಲು ಸಿಡಿಸಿದರು. ಕೊರಿಯಾ ಪರ ಜಿಯೂನ್ ಚೊಯ್ (19) ಗೋಲು ದಾಖಲಿಸಿದರು. ನಾಕೌಟ್ ರೇಸ್‌ನಿಂದ ಹೊರಬಿದ್ದಿರುವ ಭಾರತಕ್ಕೆ ಟೂರ್ನಿಯಲ್ಲಿ 9ನೇ ಸ್ಥಾನ ಪಡೆಯುವ ಅವಕಾಶವಿದೆ. ಇನ್ನೂಂದು ಕ್ರಾಸ್ ಓವರ್ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಲಿದ್ದು, ಅದರಲ್ಲಿ ಗೆದ್ದರೆ 9ನೇ ಸ್ಥಾನ, ಸೋತರೆ 11ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net