ಭಾರತ ಸಿ ತಂಡ ಚಾಂಪಿಯನ್

b team jan 10 2020
Published on

ಕಟಕ್: ಹದಿನಾರರ ಹರೆಯದ ಬ್ಯಾಟುಗಾರ್ತಿ ಶೆಫಾಲಿ ವರ್ಮ (89*ರನ್, 48 ಎಸೆತ, 15 ಬೌಂಡರಿ, 2 ಸಿಕ್ಸರ್) ಸ್ಪೋಟಕ ಆಟದ ನೆರವಿನಿಂದ ಭಾರತ ಸಿ ತಂಡ ಮಹಿಳೆಯರ ಟಿ20 ಚಾಲೆಂಜರ್ ಟ್ರೋಫಿಯಲ್ಲಿ ಪ್ರಶಸ್ತಿ ಜಯಿಸಿದೆ.

ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕನ್ನಡತಿ ವೇದಾ ಕೃಷ್ಣಮೂರ್ತಿ ಸಾರಥ್ಯದ ಭಾರತ ಸಿ ತಂಡ ಲೀಗ್ ಹಂತದಲ್ಲಿ ಅಜೇಯ ಸಾಧನೆ ಮಾಡಿದ್ದ ಭಾರತ ಬಿ ತಂಡಕ್ಕೆ 8 ವಿಕೆಟ್​ಗಳಿಂದ ಸೋಲುಣಿಸಿತು. ಬಾರಾಬತಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಭಾರತ ಬಿ ತಂಡ ಕನ್ನಡತಿ ವಿಆರ್ ವನಿತಾ (25) ಮತ್ತು ಪೂಜಾ ವಸ್ತ್ರಾಕರ್ (43*) ಉಪಯುಕ್ತ ಬ್ಯಾಟಿಂಗ್​ನಿಂದ 6 ವಿಕೆಟ್​ಗ 131 ರನ್ ಪೇರಿಸಿತು. ಪ್ರತಿಯಾಗಿ ಭಾರತ ಸಿ ತಂಡ ಶೆಫಾಲಿ ಬಿರುಸಿನ ಆಟ ಮತ್ತು ಮೊದಲ ವಿಕೆಟ್​ಗೆ ಮಾಧುರಿ ಮೆಹ್ತಾ (20) ಜತೆಗೆ ಕೂಡಿಹಾಕಿದ 77ರನ್​ಗಳ ಭದ್ರ ಅಡಿಪಾಯದಿಂದ 15.2 ಓವರ್​ಗಳಲ್ಲೇ 2 ವಿಕೆಟ್​ಗೆ 135 ರನ್ ಪೇರಿಸಿ ಜಯಿಸಿತು. ಈ ಮೂಲಕ ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಸ್ಮೃತಿ ಮಂದನಾ ಸಾರಥ್ಯದ ಭಾರತ ಬಿ ವಿರುದ್ಧ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು.

ಭಾರತ ಬಿ: 6 ವಿಕೆಟ್​ಗೆ 131 (ವಿಆರ್ ವನಿತಾ 25, ಸ್ಮೃತಿ 3, ಜೆಮೀಮಾ 10, ರಿಚಾ 15, ರವಿ ಕಲ್ಪನಾ 4, ಅನುಜಾ ಪಾಟೀಲ್ 20, ಪೂಜಾ ವಸ್ತ್ರಾಕರ್ 43*, ಮನಾಲಿ ದಕ್ಷಿಣಿ 15ಕ್ಕೆ 3, ರಾಜೇಶ್ವರಿ 24ಕ್ಕೆ 1). ಭಾರತ ಸಿ: 15.2 ಓವರ್​ಗಳಲ್ಲಿ 2 ವಿಕೆಟ್​ಗೆ 135 (ಮಾಧುರಿ 20, ಶೆಫಾಲಿ 89*, ವೇದಾ 15, ಶಿಖಾ ಪಾಂಡೆ 31ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net