ಭಾರತ vs ನ್ಯೂಜಿಲ್ಯಾಂಡ್ ಮೊದಲ ಟೆಸ್ಟ್ ಪಂದ್ಯ: ಟೀಂ ಇಂಡಿಯಾ 165ಕ್ಕೆ ಆಲ್​ಔಟ್, ಕಿವೀಸ್ ಪಡೆ ಚಹಾ ವಿರಾಮಕ್ಕೆ 2 ವಿಕೆಟ್ ಗೆ 116 ರನ್

INDvsNZ first test second day 22 FEB 20
Published on

ವೆಲ್ಲಿಂಗ್ಟನ್​: ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆತಿಥೇಯ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆಡುತ್ತಿದ್ದು, ಮೊದಲ ದಿನ ಕಳಪೆ ಸಾಧನೆ ತೋರಿ, 5 ವಿಕೆಟ್ ನಷ್ಟಕ್ಕೆ 122 ರನ್ ಸೇರಿಸಿತ್ತು. ಎರಡನೇ ದಿನ ಊಟದ ವಿರಾಮಕ್ಕೂ ಸ್ವಲ್ಪ ಹೊತ್ತು ಮೊದಲು 165 ರನ್​ಗೆ ಟೀಂ ಇಂಡಿಯಾ ಆಲ್​ ಔಟ್ ಆಗಿದೆ. ಕೈಲ್ ಜೇಮಿಸನ್​ ಮತ್ತು ಟಿಮ್ ಸೌತಿ ತಲಾ 4 ವಿಕೆಟ್ ಉರುಳಿಸಿ ಗಮನಸೆಳೆದರು. 

ಊಟದ ವಿರಾಮದ ವೇಳೆ ನ್ಯೂಜಿಲ್ಯಾಂಡ್ ತಂಡ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿತ್ತು. ಟಾಮ್ ಲಾಥಂ 11 ರನ್​ ಗಳಿಸಿ, ಟಾಮ್ ಬ್ಲಂಡೆಲ್ 6 ರನ್ ಗಳಿಸಿ ಆಡುತ್ತಿದ್ದರು. ಚಹಾ ವಿರಾಮದ ವೇಳೆ ಕಿವೀಸ್ ತಂಡ ಎರಡು ವಿಕೆಟ್ ನಷ್ಟಕ್ಕೆ 116ರನ್​ ಗಳಿಸಿದೆ. ಟಾಮ್ ಬ್ಲಂಡೆಲ್ 30 ರನ್​, ಟಾಮ್ ಲಾಥಂ 11 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದ್ದಾರೆ. ಇಶಾಂತ್ ಶರ್ಮಾ 17 ರನ್ ಕೊಟ್ಟು ಈ ಎರಡು ವಿಕೆಟ್ ಗಳಿಸಿದ್ದಾರೆ. ಕೇನ್ ವಿಲಿಯಮ್ಸನ್​ 46 ರನ್ ಮತ್ತು ರಾಸ್ ಟೇಲರ್ 22 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ.  ಇದಕ್ಕೂ ಮುನ್ನ, ಜೇಮಿಸನ್ 16 ಓವರ್ ಎಸೆದು 49 ರನ್ ನೀಡಿ 4 ವಿಕೆಟ್ ಗಿಟ್ಟಿಸಿಕೊಂಡರೆ, ಸೌತಿ 20.1 ಓವರ್​ಗಳಲ್ಲಿ 49 ರನ್ ನೀಡಿ 4 ವಿಕೆಟ್ ಪಡೆದರು.

ಎರಡನೇ ದಿನ ಬೆಳಗ್ಗೆ ರಿಷಭ್ ಪಂತ್ ಸಿಕ್ಸರ್ ಸಿಡಿಸುವ ಮೂಲಕ ಉತ್ತಮ ಆರಂಭ ನೀಡಿದರು. ಆದರೆ, ಅಜಿಂಕ್ಯಾ ರಹಾನೆ ಅವರಿಗೆ ಜತೆಯಾಗಿ ಆಡುವ ಭರದಲ್ಲಿ ರನ್ ಔಟ್ ಆಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಅವರ ಸ್ಕೋರ್ 19 ರನ್. ಅಜಿಂಕ್ಯಾ ರಹಾನೆ 46 ರನ್​, ಮೊಹಮ್ಮದ್ ಶಮಿ 21 ರನ್ ಗಳಿಸಿ ಟೀಂ ಇಂಡಿಯಾದ ಸ್ಕೋರ್ 150ರ ಗಡಿ ದಾಟುವಂತೆ ನೋಡಿಕೊಂಡರು. ಮೊಹಮ್ಮದ್ ಶಮಿ ಒಂಭತ್ತನೇ ವಿಕೆಟ್ ಜೊತೆಯಾಟದಲ್ಲಿ ಇಶಾಂತ್ ಶರ್ಮಾ ಜತೆಗೂಡಿ 22 ರನ್ ಸೇರಿಸಿದ್ದರು. (ಏಜೆನ್ಸೀಸ್) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net