ನೆದರ್ಲೆಂಡ್ ವಿರುದ್ಧ ಭಾರತಕ್ಕೆ ನಿರೀಕ್ಷಿತ ಗೆಲುವು; ಬೌಲಿಂಗ್​ನಲ್ಲಿ ಮಿಂಚಿದ ಭುವನೇಶ್ವರ್

Team India
Published on

ಸಿಡ್ನಿ: ನೆದರ್ಲೆಂಡ್ ವಿರುದ್ಧ ಭಾರತ ತಂಡ 56 ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಟಿ-20 ವಿಶ್ವಕಪ್​ನಲ್ಲಿ ಸತತ 2ನೇ ಗೆಲುವು ದಾಖಲಿಸಿಕೊಂಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಪಡೆ ಆರಂಭಿಕ ಆಘಾತ ಅನುಭವಿಸಿತು. ಕೆ.ಎಲ್ ರಾಹುಲ್ 9 ರನ್ ಕಲೆ ಹಾಕಿದರು. ಇದರೊಂದಿಗೆ ಮತ್ತೊಂದು ರಾಹುಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಂತರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡವನ್ನು ಆಧರಿಸಿದರು. ರೋಹಿತ್ ಶರ್ಮಾ 53 ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ವಿರಾಟ್ ಕೊಹ್ಲಿಯ ಜೊತೆಯಾದ ಸೂರ್ಯಕುಮಾರ್ ಯಾದವ್ ಅಬ್ಬರಿಸಿದರು. ವಿರಾಟ್ ಕೊಹ್ಲಿ 62 ರನ್ ಹಾಗೂ ಸೂರ್ಯಕುಮಾರ್ ಯಾದವ್ 51 ರನ್ ಸಿಡಿಸಿ ಮಿಂಚಿದರು. ಇಬ್ಬರೂ ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದರು. ಮೂವರು ಬ್ಯಾಟ್ಸ್​​ಮನ್​ಗಳ ಅರ್ಧಶತಕದ ನೆರವಿನಿಂದ ಭಾರತ 180ರನ್​ಗಳ ಗುರಿ ನೀಡಿತು.

180ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ನೆದರ್ಲೆಂಡ್​ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಭುವನೇಶ್ವರ್ ಕುಮಾರ್ ಮೊದಲ ವಿಕೆಟ್ ಪಡೆದುಕೊಂಡರು. 3 ಓವರ್ ಬೌಲಿಂಗ್ ಮಾಡಿದ ಭುವನೇಶ್ವರ್ 2 ಮೇಡನ್ ಓವರ್ ಮಾಡಿ 2 ವಿಕೆಟ್ ಕಬಳಿಸಿ ಮಿಂಚಿದರು.

ಭಾರತದ ಪರ ಅರ್ಷದೀಪ್ ಸಿಂಗ್, ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಮೊಹಮ್ಮದ್ ಶಮಿ 1 ವಿಕೆಟ್ ಪಡೆದುಕೊಂಡರು. ಸಂಘಟಿತ ನಿರ್ವಹಣೆಯ ಮೂಲಕ ಭಾರತ ನೆದರ್ಲೆಂಡ್ ವಿರುದ್ಧ 53 ರನ್​ಗಳ ಜಯ ದಾಖಲಿಸಿಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net