

ರಾಯ್‌ಪುರ: ಆಲ್ರೌಂಡರ್ ಅಕ್ಷರ್ ಪಟೇಲ್ (16ಕ್ಕೆ3) ಬಿಗಿ ಸ್ಪಿನ್ ದಾಳಿ ಹಾಗೂ ಇತರ ಬೌಲರ್‌ಗಳ ಸಂಘಟಿತ ದಾಳಿಯ ಬಲದಿಂದ ಭಾರತ ತಂಡ 4ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 20 ರನ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಸೂರ್ಯಕುಮಾರ್ ಯಾದವ್ ಬಳಗ ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ 5 ಪಂದ್ಯಗಳ ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿದೆ. ಈ ಮೂಲಕ ಏಕದಿನ ವಿಶ್ವಕಪ್ ೈನಲ್ ಸೋಲಿನ ನೋವು ಕಡಿಮೆಗೊಳಿಸಿದೆ. ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಪಂದ್ಯವೀಗ ಔಪಚಾರಿಕವೆನಿಸಿದೆ.
ಶಹೀದ್ ವೀರ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ, ರಿಂಕು ಸಿಂಗ್ (46 ರನ್, 29 ಎಸೆತ,4 ಬೌಂಡರಿ, 2 ಸಿಕ್ಸರ್) ಹಾಗೂ ಜಿತೇಶ್ ಶರ್ಮ (35 ರನ್, 19 ಎಸೆತ, 1 ಬೌಂಡರಿ, 3 ಸಿಕ್ಸರ್) ಜತೆಯಾಟದ ಬಲದಿಂದ 9 ವಿಕೆಟ್‌ಗೆ 174 ರನ್ ಕಲೆಹಾಕಿತು. ಪ್ರತಿಯಾಗಿ ಭಾರತೀಯರ ಸಂಘಟಿತ ದಾಳಿಗೆ ರನ್‌ಗಳಿಸಲು ಪರದಾಡಿದ ಆಸೀಸ್, 7 ವಿಕೆಟ್‌ಗೆ 154 ರನ್‌ಗಳಿಸಲಷ್ಟೇ ಶಕ್ತವಾಯಿತು.
136: ಟೀಮ್ ಇಂಡಿಯಾ (136) ಅತಿ ಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯ ಗೆದ್ದ ಪಾಕಿಸ್ತಾನ (135) ದಾಖಲೆಯನ್ನು ಹಿಂದಿಕ್ಕಿತು. ನ್ಯೂಜಿಲೆಂಡ್ (102) ನಂತರದ ಸ್ಥಾನದಲ್ಲಿದೆ.
1. ಋತುರಾಜ್ ಗಾಯಕ್ವಾಡ್ (116 ಇನಿಂಗ್ಸ್) ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 4 ಸಾವಿರ ರನ್ ಕಲೆಹಾಕಿದ ಭಾರತೀಯರ ಎನಿಸಿದರು. ಕೆಎಲ್ ರಾಹುಲ್ (117) ದಾಖಲೆ ಮುರಿದರು.
5: ಮ್ಯಾಥ್ಯೂ ವೇಡ್ ಟಿ20 ಕ್ರಿಕೆಟ್‌ನಲ್ಲಿ 50 ಪ್ಲಸ್ ಕ್ಯಾಚ್ ಪಡೆದ 5ನೇ ವಿಕೆಟ್ ಕೀಪರ್ ಎನಿಸಿದರು. ಕ್ವಿಂಟನ್ ಡಿಕಾಕ್ (76), ಜೋಸ್ ಬಟ್ಲರ್ (59), ಧೋನಿ (57), ರ್ಇಾನ್ ಕರೀಮ್ (51) ಹಿಂದಿನ ಸಾಧಕರು.
14: ಭಾರತ ತಂಡ ತವರಿನಲ್ಲಿ ಸತತ 14 ದ್ವಿಪಕ್ಷೀಯ ಟಿ20 ಸರಣಿ ಜಯಿಸಿತು.