ಹಾಕಿ ಫೈವ್ಸ್ ಪುರುಷರ ವಿಶ್ವಕಪ್ ಭಾರತ ತಂಡಕ್ಕೆ 5ನೇ ಸ್ಥಾನ

New-Project-1-15
Published on

ಮಸ್ಕತ್ (ಓಮನ್): ಮಣಿಂದರ್ ಸಿಂಗ್ (10, 23ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತ ತಂಡ ಚೊಚ್ಚಲ ಆವೃತ್ತಿಯ ಎ್ಐಎಚ್ ಹಾಕಿ ೈವ್ಸ್ ಪುರುಷರ ವಿಶ್ವಕಪ್ ಟೂರ್ನಿಯಲ್ಲಿ 5ನೇ ಸ್ಥಾನ ಪಡೆದಿದೆ. ಬುಧವಾರ ನಡೆದ 5-6ನೇ ಸ್ಥಾನದ ಹೋರಾಟದಲ್ಲಿ ಭಾರತ ತಂಡ 6-4 ಗೋಲುಗಳಿಂದ ಈಜಿಪ್ಟ್ ತಂಡವನ್ನು ಮಣಿಸಿತು. ಇದರೊಂದಿಗೆ ಲೀಗ್ ಹಂತದ ಸೋಲಿಗೆ ಮುಯ್ಯಿ ತೀರಿಸಿದೆ.

ಕರ್ನಾಟಕದ ಮೊಹಮದ್ ರಾಹೀಲ್ (8) ಭಾರತದ ಪರ ಗೋಲಿನ ಖಾತೆ ತೆರೆಯುವ ಮೂಲಕ ಆರಂಭಿಕ ಮುನ್ನಡೆ ಒದಗಿಸಿದರು. ಪವನ್ ರಾಜ್‌ಭರ್ (8), ಮಂದೀಪ್ ಮೊರ್ (11) ಹಾಗೂ ಉತ್ತಮ್ ಸಿಂಗ್ (13) ತಲಾ ಒಂದು ಗೋಲು ಸಿಡಿಸಿ ಮುನ್ನಡೆ ತಂದರು. ಮೊದಲಾರ್ಧದ ಮುಕ್ತಾಯಕ್ಕೆ ಭಾರತ 5-1ರಿಂದ ಮೇಲುಗೈ ಸಾಧಿಸಿತು. ದ್ವಿತೀಯಾರ್ದದಲ್ಲಿ ಮತ್ತೊಂದು ಗೋಲು ದಾಖಲಿಸಿದ ಮಂದೀಪ್ ಸಿಂಗ್ ಗೆಲುವಿನ ಅಂತರ ಹಿಗ್ಗಿಸಿದರು. ಈಜಿಪ್ಟ್ 3 ಗೋಲು ಸಿಡಿಸಿ ತಿರುಗೇಟು ನೀಡಿದರೂ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತವಾಯಿತು. ಇದಕ್ಕೂ ಮುನ್ನ 5-7ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಭಾರತ 9-4ರಿಂದ ಕೀನ್ಯಾ ಎದುರು ಭರ್ಜರಿ ಗೆಲುವು ದಾಖಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net