

ಕೋಲ್ಕತ: ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್ (65ರನ್, 31 ಎಸೆತ, 1 ಬೌಂಡರಿ, 7 ಸಿಕ್ಸರ್) ಹಾಗೂ ವೆಂಕಟೇಶ್ ಅಯ್ಯರ್ (35*ರನ್, 19 ಎಸೆತ, 4 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ದಾಳಿ ನೆರವಿನಿಂದ ಭಾರತ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು 17 ರನ್‌ಗಳಿಂದ ಸೋಲಿಸಿತು. ಈ ಮೂಲಕ ಚುಟುಕು ಕ್ರಿಕೆಟ್ ಸರಣಿಯಲ್ಲಿ ಭಾರತ 3-0ಯಿಂದ ಕ್ಲೀನ್‌ಸ್ವೀಪ್ ಸಾಧಿಸಿತು. ಈ ಮುನ್ನ ಏಕದಿನ ಸರಣಿಯಲ್ಲೂ ವೈಟ್‌ವಾಷ್ ಎದುರಿಸಿದ್ದ ವಿಂಡೀಸ್ ತಂಡ, ಈ ಸಲದ ಭಾರತ ಪ್ರವಾಸದಲ್ಲಿ ಗೆಲುವು ಕಾಣದೆ ನಿರ್ಗಮಿಸಿದೆ.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, 5 ವಿಕೆಟ್‌ಗೆ 184 ರನ್ ಪೇರಿಸಿತು. ಪ್ರತಿಯಾಗಿ ನಿಕೋಲಸ್ ಪೂರನ್ (61*ರನ್, 47 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ರೊಮಾರಿಯೊ ಶೆರ್ಡ್ (29ರನ್, 21 ಎಸೆತ, 1 ಬೌಂಡರಿ, 3 ಸಿಕ್ಸರ್) ಪ್ರತಿರೋಧದ ನಡುವೆಯೂ ಹರ್ಷಲ್ ಪಟೇಲ್ (22ಕ್ಕೆ 3) ಮಾರಕ ದಾಳಿಗೆ ನಲುಗಿದ ವಿಂಡೀಸ್ 9 ವಿಕೆಟ್‌ಗೆ 167 ರನ್‌ಗಳಿಸಲಷ್ಟೇ ಶಕ್ತವಾಯಿತು.
ಭಾರತ: 5 ವಿಕೆಟ್‌ಗೆ 184 (ಸೂರ್ಯಕುಮಾರ್ ಯಾದವ್ 65, ವೆಂಕಟೇಶ್ ಅಯ್ಯರ್ 35*, ಇಶಾನ್ ಕಿಶನ್ 34, ಜೇಸನ್ ಹೋಲ್ಡರ್ 29ಕ್ಕೆ 1, ರೋಸ್ಟನ್ ಚೇಸ್ 23ಕ್ಕೆ 1), ವೆಸ್ಟ್ ಇಂಡೀಸ್: 9 ವಿಕೆಟ್‌ಗೆ 167 (ನಿಕೋಲಸ್ ಪೂರನ್ 61, ರೊವ್ಮನ್ ಪೊವೆಲ್ 25, ರೊಮಾರಿಯೊ ಶೆರ್ಡ್ 29, ಹರ್ಷಲ್ ಪಟೇಲ್ 22ಕ್ಕೆ 3, ದೀಪಕ್ ಚಹರ್ 15ಕ್ಕೆ 2, ವೆಂಕಟೇಶ್ ಅಯ್ಯರ್ 23ಕ್ಕೆ 2, ಶಾರ್ದೂಲ್ ಠಾಕೂರ್ 33ಕ್ಕೆ 2).