

ಕೋಲ್ಕತ: ಸ್ಫೋಟಕ ಬ್ಯಾಟರ್‌ಗಳಾದ ನಿಕೋಲಸ್ ಪೂರನ್ (62 ರನ್, 41 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ರೊವ್ಮನ್ ಪೊವೆಲ್ (68*ರನ್, 35 ಎಸೆತ, 4 ಬೌಂಡರಿ, 5 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ನಡುವೆಯೂ ವೆಸ್ಟ್ ಇಂಡೀಸ್ ತಂಡ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ಧ 8 ರನ್‌ಗಳಿಂದ ವೀರೋಚಿತ ಸೋಲು ಕಂಡಿತು. ಕಡೇ ಓವರ್‌ನಲ್ಲಿ ವಿಂಡೀಸ್ ಜಯ ದಾಖಲಿಸಲು 26 ರನ್‌ಗಳ ಅವಶ್ಯಕತೆಯಿತ್ತು. ಹರ್ಷಲ್ ಪಟೇಲ್ ಎಸೆದ ಓವರ್‌ನಲ್ಲಿ ಪೊವೆಲ್ 2 ಸಿಕ್ಸರ್ ಒಳಗೊಂಡಂತೆ 16 ರನ್ ಕಸಿಯಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡ ಚುಟುಕು ಕ್ರಿಕೆಟ್ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 2-0 ವಶಪಡಿಸಿಕೊಂಡಿತು.
ಈಡನ್ ಗಾರ್ಡನ್ಸ್ ಮೈದಾನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ರಿಷಭ್ ಪಂತ್ (52*ರನ್, 28 ಎಸೆತ, 7 ಬೌಂಡರಿ, 1ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (52ರನ್, 41 ಎಸೆತ, 7ಬೌಂಡರಿ, 1 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 186 ರನ್‌ಗಳಿಸಿದರೆ, ಬಳಿಕ ಗೆಲುವಿಗಾಗಿ ವಿಂಡೀಸ್ ಕಡೇ ಹಂತದವರೆಗೂ ಹೋರಾಡಿದರೂ 3 ವಿಕೆಟ್‌ಗೆ 178 ರನ್‌ಗಳಿಸಲಷ್ಟೇ ಶಕ್ತವಾಯಿತು.
ಭಾರತ: 5 ವಿಕೆಟ್‌ಗೆ 186 (ರೋಹಿತ್ ಶರ್ಮ 19, ವಿರಾಟ್ ಕೊಹ್ಲಿ 52, ರಿಷಭ್ ಪಂತ್ 52*, ವೆಂಕಟೇಶ್ ಅಯ್ಯರ್ 33, ರೋಸ್ಟನ್ ಚೇಸ್ 25ಕ್ಕೆ 3, ಶೇಲ್ಡನ್ ಕಾಟ್ರೆಲ್ 20ಕ್ಕೆ 1), ವೆಸ್ಟ್ ಇಂಡೀಸ್: 3 ವಿಕೆಟ್‌ಗೆ 178 (ಬ್ರೆಂಡನ್ ಕಿಂಗ್ 22, ನಿಕೋಲಸ್ ಪೂರನ್ 62, ರೊವ್ಮನ್ ಪೊವೆಲ್ 68*, ಭುವನೇಶ್ವರ್ ಕುಮಾರ್ 29ಕ್ಕೆ 1, ಯಜುವೇಂದ್ರ ಚಾಹಲ್ 31ಕ್ಕೆ 1, ರವಿ ಬಿಷ್ಣೋಯಿ 30ಕ್ಕೆ 1)