

ದುಬೈ: ಆರಂಭಿಕ ಬ್ಯಾಟರ್ ಹರ್ನೂರ್ ಸಿಂಗ್ (120ರನ್, 130 ಎಸೆತ, 11 ಬೌಂಡರಿ) ಶತಕದಾಟ ಹಾಗೂ ಬೌಲರ್‌ಗಳ ಸಂಘಟಿತ ಯತ್ನದ ಫಲವಾಗಿ ಭಾರತ ಕಿರಿಯರ ತಂಡ 19 ವಯೋಮಿತಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಐಸಿಸಿ ಅಕಾಡೆಮಿ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 154 ರನ್‌ಗಳಿಂದ ಆತಿಥೇಯ ಯುಎಇ ತಂಡವನ್ನು ಸೋಲಿಸಿತು. ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ದೃಷ್ಟಿಯಿಂದ ಭಾರತದ ಪಾಲಿಗೆ ಈ ಟೂರ್ನಿ ಮಹತ್ವ ಪಡೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಆರಂಭಿಕ ವೈಫಲ್ಯದ ನಡುವೆಯೂ ಹರ್ನೂರ್ ಸಿಂಗ್ ಭರ್ಜರಿ ಬ್ಯಾಟಿಂಗ್ ಹಾಗೂ ನಾಯಕ ಯಶ್ ಧುಲ್ (63ರನ್, 68 ಎಸೆತ, 4 ಬೌಂಡರಿ) ಬಿರುಸಿನ ಬ್ಯಾಟಿಂಗ್ ಫಲವಾಗಿ 5 ವಿಕೆಟ್‌ಗೆ 282 ರನ್ ಪೇರಿಸಿತು. ಬಳಿಕ ಭಾರತದ ಮಾರಕ ದಾಳಿಗೆ ತತ್ತರಿಸಿದ ಯುಎಇ ತಂಡ, 34.3 ಓವರ್‌ಗಳಲ್ಲಿ 128 ರನ್‌ಗಳಿಗೆ ಸರ್ವಪತನ ಕಂಡಿತು. ರಾಜವರ್ಧನ್ ಹಂಗಾರ್ಗೆಕರ್ 3 ವಿಕೆಟ್ ಕಬಳಿಸಿದರೆ, ಗಾರ್ವ್ ಸಂಗ್ವಾನ್, ವಿಕ್ಕಿ ಓಟ್ಸ್‌ವಾಲ್ ಹಾಗೂ ಕೌಶಾಲ್ ತಂಬೆ ತಲಾ 2 ವಿಕೆಟ್ ಕಬಳಿಸಿದರು.
ಭಾರತ ತಂಡ: 5 ವಿಕೆಟ್‌ಗೆ 282 (ಹರ್ನೂರ್ ಸಿಂಗ್ 120, ಯಶ್ ಧುಲ್ 63, ರಾಜವರ್ಧನ್ ಹಂಗಾರ್ಗೆಕರ್ 48*, ಅಲಿಶಾನ್ ಷರು 44ಕ್ಕೆ 2, ಅ್ಜಲ್ ಖಾನ್ 38ಕ್ಕೆ 1), ಯುಎಇ: 34.3 ಓವರ್‌ಗಳಲ್ಲಿ 128 (ಕೈ ಸ್ಮಿತ್ 45, ಸೂರ್ಯ ಸತೀಶ್ 21, ರಾಜವರ್ಧನ್ ಹಂಗಾರ್ಗೆಕರ್ 24ಕ್ಕೆ 3, ವಿಕ್ಕಿ ಓಟ್ಸ್‌ವಾಲ್ 7ಕ್ಕೆ 2, ಕೌಶಾಲ್ ತಂಬೆ 16ಕ್ಕೆ 2, ಗಾರ್ವ್ ಸಾಂಗ್ವಾನ್ 39ಕ್ಕೆ 2).
ಮುಂದಿನ ಎದುರಾಳಿ: ಪಾಕಿಸ್ತಾನ, ಯಾವಾಗ: ಶನಿವಾರ