

ಕೇಪ್‌ಟೌನ್: ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಜಯಿಸುವ ಭಾರತ ತಂಡದ ಕನಸು ಸತತ 8ನೇ ಬಾರಿಯೂ ಭಗ್ನಗೊಂಡಿದೆ. ನ್ಯೂಜಿಲೆಂಡ್ ಮೈದಾನದಲ್ಲಿ ಶುಕ್ರವಾರ ಮುಕ್ತಾಯಗೊಂಡ ಸರಣಿ ನಿರ್ಣಾಯಕ 3ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ 7 ವಿಕೆಟ್‌ಗಳಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಶರಣಾಯಿತು. ಆರಂಭಿಕ ಮುನ್ನಡೆ ನಡುವೆಯೂ ಸರಣಿ ವಶಪಡಿಸಿಕೊಳ್ಳುವಲ್ಲಿ ಭಾರತ ಎಡವಿತು. ಇದರಿಂದ 1992ರಿಂದ ಭಾರತ ಆಡಿದ 8ನೇ ಸರಣಿಯಲ್ಲೂ ನಿರಾಸೆ ಅನುಭವಿಸುವುದರ ಜತೆಗೆ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನಂ.1 ಪಟ್ಟವನ್ನು ಕಳೆದುಕೊಂಡಿತು.
ಭಾರತ ನೀಡಿದ 212 ರನ್ ಗೆಲುವಿನ ಪ್ರತಿಯಾಗಿ 2 ವಿಕೆಟ್‌ಗೆ 101 ರನ್‌ಗಳಿಂದ ನಾಲ್ಕನೇ ದಿನದಾಟ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ (ಕೀಗನ್ ಪೀಟರ್ಸೆನ್ 82*ರನ್, 113 ಎಸೆತ, 10 ಬೌಂಡರಿ) ಹಾಗೂ ರಾಸೀ ವ್ಯಾನ್ ಡರ್ ಡುಸೆನ್ (41*ರನ್, 95 ಎಸೆತ, 3 ಬೌಂಡರಿ) ಜೋಡಿಗೆ ದಿನದ ಆರಂಭದಲ್ಲೇ ಬ್ರೇಕ್ ಹಾಕಲು ವಿಫಲವಾದ ಭಾರತ ತಂಡ ನಿರಾಸೆ ಕಂಡಿತು. ಇದರಿಂದ ಇದರಿಂದ ದಕ್ಷಿಣ ಆಫ್ರಿಕಾ ತಂಡ 63.3 ಓವರ್‌ಗಳಲ್ಲಿ 3 ವಿಕೆಟ್‌ಗೆ 212 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಭಾರತ ಮೊದಲ ಇನಿಂಗ್ಸ್ 223 ರನ್‌ಗಳಿಸಿದರೆ, ದಕ್ಷಿಣ ಆಫ್ರಿಕಾ 210 ರನ್‌ಗಳಿಸಿತ್ತು. ಇದರಿಂದ 13 ರನ್ ಮುನ್ನಡೆಯೊಂದಿಗೆ ಭಾರತ ಎರಡನೇ ಇನಿಂಗ್ಸ್‌ನಲ್ಲಿ 198 ರನ್‌ಗಳಿಸಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಭಾರತ 5ನೇ ಸ್ಥಾನಕ್ಕೆ ಕುಸಿತ ಕಂಡರೆ, ದಕ್ಷಿಣ ಆಫ್ರಿಕಾ ತಂಡ 4ನೇ ಸ್ಥಾನಕ್ಕೇರಿತು.
ಭಾರತ: 223 ಮತ್ತು 198, ದಕ್ಷಿಣ ಆಫ್ರಿಕಾ: 201 ಮತ್ತು 3 ವಿಕೆಟ್‌ಗೆ 212 (ಕೀಗನ್ ಪೀಟರ್ಸೆನ್ 82*, ರಾಸೀ ವ್ಯಾನ್ ಡರ್ ಡುಸೆನ್ 41*, ಟೆಂಬಾ ಬವುಮಾ 32*, ಜಸ್‌ಪ್ರೀತ್ ಬುಮ್ರಾ 54ಕ್ಕೆ 1, ಮೊಹಮದ್ ಶಮಿ 41ಕ್ಕೆ 1, ಶಾರ್ದೂಲ್ ಠಾಕೂರ್ 22ಕ್ಕೆ 1).