

ಕೋಲ್ಕತ: ನಾಯಕ ರೋಹಿತ್ ಶರ್ಮ (56 ರನ್, 31 ಎಸೆತ, 5 ಬೌಂಡರಿ, 3 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಹಾಗೂ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ (9ಕ್ಕೆ 3) ಮಾರಕ ದಾಳಿಗೆ ನಲುಗಿದ ಪ್ರವಾಸಿ ನ್ಯೂಜಿಲೆಂಡ್ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡದ ಎದುರು 73 ರನ್‌ಗಳಿಂದ ಸೋಲನುಭವಿಸಿತು. ಇದರಿಂದ ಭಾರತ ತಂಡ ಚುಟುಕು ಕ್ರಿಕೆಟ್ ಸರಣಿಯಲ್ಲಿ 3-0ಯಿಂದ ಕ್ಲೀನ್‌ಸ್ವೀಪ್ ಸಾಧಿಸಿತು. ನೂತನ ಕೋಚ್-ಕ್ಯಾಪ್ಟನ್ ಜೋಡಿಯಾದ ರಾಹುಲ್ ದ್ರಾವಿಡ್-ರೋಹಿತ್ ಶರ್ಮ ಚೊಚ್ಚಲ ಸರಣಿಯಲ್ಲೇ ಭರ್ಜರಿ ನಿರ್ವಹಣೆ ಮೂಲಕ ಗಮನಸೆಳೆದರು.
ಈಡನ್ ಗಾರ್ಡನ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಮಧ್ಯಮ ಕ್ರಮಾಂಕದ ಕುಸಿತದ ನಡುವೆಯೂ 7 ವಿಕೆಟ್‌ಗೆ 184 ರನ್ ಪೇರಿಸಿತು. ಪ್ರತಿಯಾಗಿ ನ್ಯೂಜಿಲೆಂಡ್ ತಂಡ, ಆತಿಥೇಯರ ಕರಾರುವಾಕ್ ದಾಳಿಗೆ ನಲುಗಿ 17.2 ಓವರ್‌ಗಳಲ್ಲಿ 111 ರನ್‌ಗಳಿಗೆ ಸರ್ವಪತನ ಕಂಡಿತು.
ಭಾರತ: 7 ವಿಕೆಟ್‌ಗೆ 184 (ರೋಹಿತ್ ಶರ್ಮ 56, ಇಶಾನ್ ಕಿಶನ್ 29, ಶ್ರೇಯಸ್ ಅಯ್ಯರ್ 25, ವೆಂಕಟೇಶ್ ಅಯ್ಯರ್ 20, ಹರ್ಷಲ್ ಪಟೇಲ್ 18, ದೀಪಕ್ ಚಹರ್ 21*, ಮಿಚೆಲ್ ಸ್ಯಾಂಟ್ನರ್ 27ಕ್ಕೆ 3, ಟ್ರೆಂಟ್ ಬೌಲ್ಟ್ 31ಕ್ಕೆ 1, ಆಡಂ ಮಿಲ್ನೆ 47ಕ್ಕೆ 1, ಲಾಕಿ ರ್ಗ್ಯುಸನ್ 45ಕ್ಕೆ 1, ಇಶ್ ಸೋಧಿ 31ಕ್ಕೆ 1), ನ್ಯೂಜಿಲೆಂಡ್: 17.2 ಓವರ್‌ಗಳಲ್ಲಿ 111 (ಮಾರ್ಟಿನ್ ಗುಪ್ಟಿಲ್ 51, ಟಿಮ್ ಸೀರ್ಟ್ 17, ರ್ಗ್ಯುಸನ್ 14, ಅಕ್ಷರ್ ಪಟೇಲ್ 9ಕ್ಕೆ 3, ಹರ್ಷಲ್ ಪಟೇಲ್ 26ಕ್ಕೆ 2, ಯಜುವೇಂದ್ರ ಚಾಹಲ್ 26ಕ್ಕೆ 1, ವೆಂಕಟೇಶ್ ಅಯ್ಯರ್ 12ಕ್ಕೆ 1, ದೀಪಕ್ ಚಹರ್ 26ಕ್ಕೆ 1).