

ಕಾನ್ಪುರ: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ತಂಡದ ಆರಂಭಿಕರ ಅಬ್ಬರದ ನಡುವೆಯೂ ಭಾರತದ ಬೌಲರ್‌ಗಳು ಪಾರಮ್ಯ ಸಾಧಿಸಲು ಯಶಸ್ವಿಯಾದರು. ಗ್ರೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ (62ಕ್ಕೆ 5) ಹಾಗೂ ಆರ್.ಅಶ್ವಿನ್ (82ಕ್ಕೆ 3) ಮಾರಕ ದಾಳಿ ನೆರವಿನಿಂದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 49 ರನ್ ಮುನ್ನಡೆ ಸಾಧಿಸಿದೆ. ದಿನದಾಟದ ಕಡೇ ಹಂತದಲ್ಲಿ ಎರಡನೇ ಸರದಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭಿಕ ಆಘಾತ ಎದುರಿಸಿದೆ.
ಶನಿವಾರ ಬೆಳಗ್ಗೆ ವಿಕೆಟ್ ನಷ್ಟವಿಲ್ಲದೆ 129 ರನ್‌ಗಳಿಂದ ಮೂರನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡ, ಭಾರತದ ಬಿಗಿ ಬೌಲಿಂಗ್ ದಾಳಿಗೆ ನಲುಗಿ 142.3 ಓವರ್‌ಗಳಲ್ಲಿ 296 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಅಲ್ಪಮೊತ್ತ ಇನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 14 ರನ್ ಪೇರಿಸಿದ್ದು, ಒಟ್ಟಾರೆ 63 ರನ್ ಮುನ್ನಡೆ ಸಾಧಿಸಿದೆ.
ಭಾರತ: 345 ಮತ್ತು 5 ಓವರ್‌ಗಳಲ್ಲಿ 1 ವಿಕೆಟ್‌ಗೆ 14 (ಮಯಾಂಕ್ ಅಗರ್ವಾಲ್ 4*, ಗಿಲ್ 1, ಚೇತೇಶ್ವರ ಪೂಜಾರ 9*, ಜೇಮಿಸನ್ 8ಕ್ಕೆ 1). ನ್ಯೂಜಿಲೆಂಡ್: 142.3 ಓವರ್‌ಗಳಲ್ಲಿ 296 (ಟಾಮ್ ಲಾಥಮ್ 95, ವಿಲ್ ಯಂಗ್ 89, ಕೇನ್ ವಿಲಿಯಮ್ಸನ್ 18, ಟಾಮ್ ಬ್ಲಂಡೆಲ್ 13, ಜೇಮಿಸನ್ 23, ಅಕ್ಷರ್ ಪಟೇಲ್ 62ಕ್ಕೆ 5, ಆರ್.ಅಶ್ವಿನ್ 82ಕ್ಕೆ 3, ರವೀಂದ್ರ ಜಡೇಜಾ 57ಕ್ಕೆ 1, ಉಮೇಶ್ ಯಾದವ್ 50ಕ್ಕೆ 1).