ಇಂಗ್ಲೆಂಡ್ ತಂಡಕ್ಕೆ ವೇಗಿಗಳ ಬ್ರೇಕ್ ; ಭಾರತ ಎಚ್ಚರಿಕೆಯ ಆರಂಭ

india and england for web
Published on

ನಾಟಿಂಗ್‌ಹ್ಯಾಂ: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ ತಂಡ 2ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಕಂಡಿದೆ. ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಹಣಾಹಣಿಯ ಮೊದಲ ದಿನದಾಟದಲ್ಲಿ ಭಾರತದ ವೇಗದ ಬೌಲರ್‌ಗಳು ಮೇಲುಗೈ ಸಾಧಿಸಿದರು.

ಟಾಸ್ ಜಯಿಸಿ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ತಂಡ, ವೇಗಿಗಳಾದ ಮೊಹಮದ್ ಶಮಿ (28ಕ್ಕೆ 3), ಜಸ್‌ಪ್ರೀತ್ ಬುಮ್ರಾ (46ಕ್ಕೆ 4) ಮಾರಕ ದಾಳಿಗೆ ನಲುಗಿ 65.3 ಓವರ್‌ಗಳಲ್ಲಿ 183 ರನ್‌ಗಳಿಗೆ ಸರ್ವಪತನ ಕಂಡಿತು. ಅಗ್ರ ಕ್ರಮಾಂಕದ ವೈಫಲ್ಯದ ನಡುವೆಯೂ ನಾಯಕ ಜೋ ರೂಟ್ (64 ರನ್, 108 ಎಸೆತ, 11 ಬೌಂಡರಿ) ಅರ್ಧಶತಕದ ಪ್ರತಿರೋಧ ತೋರಿದರು. ಪ್ರತಿಯಾಗಿ ಭಾರತ ತಂಡ ದಿನದಂತ್ಯಕ್ಕೆ 13 ಓವರ್ ಎದುರಿಸಿ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ರೋಹಿತ್ ಶರ್ಮ ಮತ್ತು ಕೆಎಲ್ ರಾಹುಲ್ ತಲಾ 9 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಭಾರತ ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 162 ರನ್ ಪೇರಿಸಬೇಕಿದೆ.

ಇಂಗ್ಲೆಂಡ್: 65.4 ಓವರ್‌ಗಳಲ್ಲಿ 183 (ಜೋ ರೂಟ್ 64, ಜಾನಿ ಬೇರ್‌ಸ್ಟೋ 29, ಡೊಮಿನಿಕ್ ಸಿಬ್ಲೆ 18, ಜಾಕ್ ಕ್ರೌಲೆ 27, ಸ್ಯಾಮ್ ಕರ‌್ರನ್ 27*, ಜಸ್‌ಪ್ರೀತ್ ಬುಮ್ರಾ 46ಕ್ಕೆ 4, ಮೊಹಮದ್ ಶಮಿ 28ಕ್ಕೆ 3, ಶಾರ್ದೂಲ್ ಠಾಕೂರ್ 41ಕ್ಕೆ 2). ಭಾರತ: 13 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 (ರೋಹಿತ್ ಶರ್ಮ 9*, ಕೆಎಲ್ ರಾಹುಲ್ 9*).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net