

ಚೆನ್ನೈ: ನಾಯಕ ಜೋ ರೂಟ್ (218ರನ್, 377 ಎಸೆತ, 19 ಬೌಂಡರಿ, 2 ಸಿಕ್ಸರ್) ಭರ್ಜರಿ ದ್ವಿಶತಕದಾಟದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಚೆಪಾಕ್ ಅಂಗಳದ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್‌ಗೆ 263 ರನ್‌ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ, ರೂಟ್ ದ್ವಿಶತಕದಾಟ ಹಾಗೂ ಬೆನ್ ಸ್ಟೋಕ್ಸ್ (82ರನ್, 118 ಎಸೆತ, 10 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಲವಾಗಿ ಎರಡನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್‌ಗೆ 555 ರನ್ ಪೇರಿಸಿದೆ. ಸತತ ಎರಡನೇ ದಿನವೂ ಕ್ರೀಸ್‌ನಲ್ಲಿ ನಿಂತ ಇಂಗ್ಲೆಂಡ್ ಆಟಗಾರರು ಪಂದ್ಯದಲ್ಲಿ ಸದ್ಯದ ಮಟ್ಟಿಗೆ ಮೇಲುಗೈ ಸಾಧಿಸಿದ್ದಾರೆ.
* ತಪ್ಪಿದ ಭಾರತೀಯರ ಬೌಲಿಂಗ್ ‘ರೂಟ್’
128 ರನ್ ಗಳಿಸಿದ್ದ ಜೋ ರೂಟ್‌ಗೆ ದಿನದಾಟದಲ್ಲಿ ಕೂಡಿಕೊಂಡ ಬೆನ್ ಸ್ಟೋಕ್ಸ್ ಉತ್ತಮ ಸಾಥ್ ನೀಡಿದರು. ಈ ಜೋಡಿ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಭಾರತೀಯ ಬೌಲರ್‌ಗಳಿಗೆ ಸವಾಲಾಯಿತು. ಭೋಜನ ವಿರಾಮದವರೆಗೂ ಈ ಜೋಡಿ ವಿಕೆಟ್ ಕಾಯ್ದುಕೊಂಡಿತು. ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದ ನಾಯಕ ರೂಟ್ ಭಾರತೀಯ ಬೌಲರ್‌ಗಳನ್ನು ಎರಡನೇ ದಿನದಾಟದಲ್ಲೂ ಬೆಂಡೆತ್ತಿದರು. ಈ ಜೋಡಿ 4ನೇ ವಿಕೆಟ್‌ಗೆ 124 ರನ್ ಕಲೆಹಾಕುವ ಮೂಲಕ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಭಾರತೀಯ ಬೌಲರ್‌ಗಳಿಗೆ ತಲೆನೋವಾಗಿದ್ದ ಈ ಜೋಡಿಗೆ ಶಾಬಾದ್ ನದೀಂ ಬ್ರೇಕ್ ಹಾಕಿದರು.
ಇಂಗ್ಲೆಂಡ್: 180 ಓವರ್‌ಗಳಲ್ಲಿ 8 ವಿಕೆಟ್‌ಗೆ 555 (ಜೋ ರೂಟ್ 218, ಬೆನ್ ಸ್ಟೋಕ್ಸ್ 82, ಒಲಿ ಪೊಪ್ 34, ಜೋಸ್ ಬಟ್ಲರ್ 30, ಇಶಾಂತ್ ಶರ್ಮ 52ಕ್ಕೆ 2, ಜಸ್‌ಪ್ರೀತ್ ಬುಮ್ರಾ 81ಕ್ಕೆ 2, ಆರ್.ಅಶ್ವಿನ್ 132ಕ್ಕೆ 2, ಶಾಬಾಜ್ ನದೀಂ 167ಕ್ಕೆ 2)