ಇಂಗ್ಲೆಂಡ್ ಎದುರು ಭಾರತದ ಗೆಲುವಿಗೆ ಅಡ್ಡಿಯಾದ ಮಳೆ

india and england for web.jpg new
Published on

ನಾಟಿಂಗ್‌ಹ್ಯಾಂ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಕನಸಿನಲ್ಲಿದ್ದ ಭಾರತ ತಂಡಕ್ಕೆ ಮಳೆ ಅಡ್ಡಿಪಡಿಸಿತು. ಟ್ರೆಂಟ್‌ಬ್ರಿಜ್ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದ 5ನೇ ಹಾಗೂ ಕಡೇ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಇದರಿಂದಾಗಿ 5 ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಕಾಣುವ ಭಾರತದ ಆಸೆ ಈಡೇರದೆ ಡ್ರಾಕ್ಕೆ ತೃಪ್ತಿಪಟ್ಟಿತು.ಇಂಗ್ಲೆಂಡ್ ನೀಡಿದ್ದ 209 ರನ್ ಸವಾಲಿಗೆ ಪ್ರತಿಯಾಗಿ ಭಾರತ ತಂಡ 4ನೇ ದಿನದಾಟದ 14 ಓವರ್‌ಗಳಲ್ಲಿ 1 ವಿಕೆಟ್‌ಗೆ 52 ರನ್ ಪೇರಿಸಿತ್ತು. ಅಂತಿಮ ದಿನದಾಟದಲ್ಲಿ ಭಾರತ ತಂಡ ಜಯ ದಾಖಲಿಸಲು ಇನ್ನೂ 157 ರನ್ ಪೇರಿಸಬೇಕಿತ್ತು. ರೋಹಿತ್ ಶರ್ಮ (12*) ಹಾಗೂ ಚೇತೇಶ್ವರ ಪೂಜಾರ (12*) ಕ್ರೀಸ್‌ನಲ್ಲಿದ್ದರು. ಇದರಿಂದ 2ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಮೊದಲ ಹಣಾಹಣಿಯೇ ಡ್ರಾನಲ್ಲಿ ಅಂತ್ಯ ಕಂಡಿತು. ಉಭಯ ತಂಡಗಳು ತಲಾ 4 ಅಂಕ ಹಂಚಿಕೊಂಡವು.

ಇಂಗ್ಲೆಂಡ್: 183 ಮತ್ತು 303, ಭಾರತ: 278 ಮತ್ತು 14 ಓವರ್‌ಗಳಲ್ಲಿ 1 ವಿಕೆಟ್‌ಗೆ 52 (ಕೆಎಲ್ ರಾಹುಲ್ 26, ರೋಹಿತ್ ಶರ್ಮ 12*, ಚೇತೇಶ್ವರ ಪೂಜಾರ 12*, ಸ್ಟುವರ್ಟ್ ಬ್ರಾಡ್ 18ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net