ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಎದುರು 8 ವಿಕೆಟ್‌ಗಳಿಂದ ಸೋತ ಭಾರತ ತಂಡ

india and england for web
Published on

ಅಹಮದಾಬಾದ್: ಆಸ್ಟ್ರೇಲಿಯಾ ಪ್ರವಾಸದಿಂದ ಭಾರತ ತಂಡಕ್ಕೂ ಆರಂಭಿಕ ಹಿನ್ನಡೆಗೂ ಇರುವ ಅವಿನಾಭಾವ ಸಂಬಂಧ ಮುಂದುವರಿದಿದೆ. ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ದಿಟ್ಟ ತಿರುಗೇಟು ನೀಡಿ ಬೀಗಿದ್ದ ವಿರಾಟ್ ಕೊಹ್ಲಿ ಪಡೆ ಚುಟುಕು ಕ್ರಿಕೆಟ್ ಸರಣಿಯಲ್ಲಿ ಆರಂಭದಲ್ಲೇ ಮುಗ್ಗರಿಸಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂದು ಹೆಸರಾಗಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ, ಏಕದಿನ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ 8 ವಿಕೆಟ್‌ಗಳಿಂದ ಶರಣಾಯಿತು. 5 ಪಂದ್ಯಗಳ ಸರಣಿಯಲ್ಲಿ ಭಾರತ 0-1 ರಿಂದ ಹಿನ್ನಡೆ ಕಂಡಿತು.

ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಇವೊಯಿನ್ ಮಾರ್ಗನ್ ಆತಿಥೇಯ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಶ್ರೇಯಸ್ ಅಯ್ಯರ್ (67 ರನ್, 48 ಎಸೆತ, 8 ಬೌಂಡರಿ, 1 ಸಿಕ್ಸರ್) ಸಮಯೋಚಿತ ನಿರ್ವಹಣೆ ನಡುವೆಯೂ ವೇಗಿ ಜೋಫ್ರಾ ಆರ್ಚರ್ (23ಕ್ಕೆ 3) ಮಾರಕ ದಾಳಿಗೆ ನಲುಗಿದ ಭಾರತ ತಂಡ 7 ವಿಕೆಟ್‌ಗೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ 15.3 ಓವರ್‌ಗಳಲ್ಲಿ 2 ವಿಕೆಟ್‌ಗೆ 130 ರನ್ ಗಳಿಸಿ ಜಯ ದಾಖಲಿಸಿತು.

ಭಾರತ ತಂಡ: 7 ವಿಕೆಟ್‌ಗೆ 124 (ಶಿಖರ್ ಧವನ್ 4, ಕೆಎಲ್ ರಾಹುಲ್ 1, ವಿರಾಟ್ ಕೊಹ್ಲಿ 0, ರಿಷಭ್ ಪಂತ್ 21, ಶ್ರೇಯಸ್ ಅಯ್ಯರ್ 67, ಹಾರ್ದಿಕ್ ಪಾಂಡ್ಯ 19, ಜೋಫ್ರಾ ಆರ್ಚರ್ 23ಕ್ಕೆ 3, ಮಾರ್ಕ್ ವುಡ್ 20ಕ್ಕೆ 1, ಆದಿಲ್ ರಶೀದ್ 14ಕ್ಕೆ 1, ಕ್ರಿಸ್ ಜೋರ್ಡಾನ್ 27ಕ್ಕೆ 1, ಬೆನ್ ಸ್ಟೋಕ್ಸ್ 25ಕ್ಕೆ 1), ಇಂಗ್ಲೆಂಡ್ ತಂಡ: 15.3 ಓವರ್‌ಗಳಲ್ಲಿ 2 ವಿಕೆಟ್‌ಗೆ 130 (ಜೇಸನ್ ರಾಯ್ 49, ಜೋಸ್ ಬಟ್ಲರ್ 28, ಡೇವಿಡ್ ಮಲನ್ 24*, ಜಾನಿ ಬೇರ್‌ಸ್ಟೋ 26*, ಯಜುವೇಂದ್ರ ಚಾಹಲ್ 44ಕ್ಕೆ 1, ವಾಷಿಂಗ್ಟನ್ ಸುಂದರ್ 18ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net