4ನೇ ಟಿ20 ಪಂದ್ಯ: ಇಂಗ್ಲೆಂಡ್ ಎದುರು ಭಾರತ ತಂಡಕ್ಕೆ 8 ರನ್‌ಗಳ ರೋಚಕ ಜಯ

india and england match for web
Published on

ಅಹಮದಾಬಾದ್: ಅಂತಿಮ ಕ್ಷಣದವರೆಗೂ ಕುತೂಹಲ ಕಾಯ್ದುಕೊಂಡ 4ನೇ ಟಿ20 ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧ 8 ರನ್‌ಗಳಿಂದ ರೋಚಕ ಜಯ ದಾಖಲಿಸಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಚೊಚ್ಚಲ ಇನಿಂಗ್ಸ್‌ನಲ್ಲೇ ಆಸರೆಯಾಗಿ ನಿಂತ ಸೂರ್ಯಕುಮಾರ್ ಯಾದವ್ (57ರನ್, 31 ಎಸೆತ, 6 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಶಾರ್ದೂಲ್ ಠಾಕೂರ್ (42ಕ್ಕೆ 3) ಮಾರಕ ದಾಳಿ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ 5 ಪಂದ್ಯಗಳ ಸರಣಿ 2-2 ರಿಂದ ಸಮಬಲ ಕಂಡಿತು.

ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 8 ವಿಕೆಟ್‌ಗೆ 185 ರನ್‌ಗಳಿಸಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ, ಬೆನ್ ಸ್ಟೋಕ್ಸ್ (46ರನ್, 23 ಎಸೆತ, 4 ಬೌಂಡರಿ, 3 ಸಿಕ್ಸರ್) ಪ್ರತಿಹೋರಾಟದ ನಡುವೆಯೂ 8 ವಿಕೆಟ್‌ಗೆ 177 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತ : 8 ವಿಕೆಟ್‌ಗೆ 185 (ರೋಹಿತ್ ಶರ್ಮ 12, ರಾಹುಲ್ 14, ಸೂರ್ಯಕುಮಾರ್ ಯಾದವ್ 57, ರಿಷಭ್ ಪಂತ್ 30, ಶ್ರೇಯಸ್ ಅಯ್ಯರ್ 37, ಜ್ರೋಾ ಆರ್ಚರ್ 33ಕ್ಕೆ 4, ಆದಿಲ್ ರಶೀದ್ 39ಕ್ಕೆ 1, ಬೆನ್ ಸ್ಟೋಕ್ಸ್ 26ಕ್ಕೆ 1, ಸ್ಯಾಮ್ ಕರ‌್ರನ್ 16ಕ್ಕೆ 1), ಇಂಗ್ಲೆಂಡ್: 8 ವಿಕೆಟ್‌ಗೆ 177 (ಜೇಸನ್ ರಾಯ್ 40, ಡೇವಿಡ್ ಮಲಾನ್ 14, ಜಾನಿ ಬೇರ್‌ಸ್ಟೋ 25, ಬೆನ್ ಸ್ಟೋಕ್ಸ್ 46, ಶಾರ್ದೂಲ್ ಠಾಕೂರ್ 42ಕ್ಕೆ 3, ಹಾರ್ದಿಕ್ ಪಾಂಡ್ಯ 16ಕ್ಕೆ 2, ರಾಹುಲ್ ಚಹರ್ 35ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net