ಮಹಿಳಾ ಏಕದಿನ ವಿಶ್ವಕಪ್; ಭಾರತದ ಹೋರಾಟ ಜೀವಂತ ; ಬಾಂಗ್ಲಾದೇಶ ಎದುರು ಸುಲಭ ಜಯ

india and bangla women match for web
Published on

ಹ್ಯಾಮಿಲ್ಟನ್: ಉಪಾಂತ್ಯಕ್ಕೇರಲು ಮಾಡಿ ಇಲ್ಲವೆ ಮಡಿ ಸ್ಥಿತಿಯಲ್ಲಿರುವ ಭಾರತ ತಂಡ, ಸ್ನೇಹಾ ರಾಣಾ (27 ರನ್, 23 ಎಸೆತ, 2 ಬೌಂಡರಿ, 30ಕ್ಕೆ 4 ವಿಕೆಟ್) ಆಲ್ರೌಂಡ್ ನಿರ್ವಹಣೆ ನೆರವಿನಿಂದ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ದುರ್ಬಲ ಬಾಂಗ್ಲಾದೇಶ ತಂಡವನ್ನು 110 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಒಟ್ಟು 6 ಅಂಕ ಕಲೆಹಾಕಿರುವ ಮಿಥಾಲಿ ರಾಜ್ ಸಾರಥ್ಯದ ಭಾರತ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರುವ ಮೂಲಕ ನಾಕೌಟ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಸೆಡನ್ ಪಾರ್ಕ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಯಶ್ತಿಕಾ ಭಾಟಿಯಾ (50 ರನ್, 80 ಎಸೆತ, 2 ಬೌಂಡರಿ) ಜವಾಬ್ದಾಯುತ ನಿರ್ವಹಣೆ ಫಲವಾಗಿ 7 ವಿಕೆಟ್‌ಗೆ 229 ರನ್ ಪೇರಿಸಿತು. ಪ್ರತಿಯಾಗಿ ಬಾಂಗ್ಲಾದೇಶ ತಂಡ 40.3 ಓವರ್‌ಗಳಲ್ಲಿ 119 ರನ್‌ಗಳಿಗೆ ಸರ್ವಪತನ ಕಂಡಿತು.

ಭಾರತ : 7 ವಿಕೆಟ್‌ಗೆ 229 (ಸ್ಮತಿ ಮಂದನಾ 30, ಶಾಲಿ ವರ್ಮ 42, ಯಶ್ತಿಕಾ ಭಾಟಿಯಾ 50, ರಿಚಾ ೋಷ್ 26, ಪೂಜಾ ವಸಾಕರ್ 30*, ಸ್ನೇಹಾ ರಾಣಾ 27, ರಿತು ಮೊನಿ 37ಕ್ಕೆ 3, ನಹಿದಾ ಅಖ್ತೆರ್ 42ಕ್ಕೆ 2), ಬಾಂಗ್ಲಾದೇಶ: 40.3 ಓವರ್‌ಗಳಲ್ಲಿ 119 (ಲತಾ ಮಂಡಲ್ 24, ಸಲ್ಮಾ ಕತುನ್ 32, ಸ್ನೇಹಾ ರಾಣಾ 30ಕ್ಕೆ 4, ಪೂಜಾ ವಸಾಕರ್ 26ಕ್ಕೆ 2, ಜೂಲನ್ ಗೋಸ್ವಾಮಿ 19ಕ್ಕೆ 2, ರಾಜೇಶ್ವರಿ ಗಾಯಕ್ವಾಡ್ 15ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net