ಆಸ್ಟ್ರೇಲಿಯಾ ಎದುರು ಟಿ20 ಸರಣಿಯಲ್ಲೂ ಸೋತ ಭಾರತ ಮಹಿಳಾ ತಂಡ

indian women team for web
Published on

ಗೋಲ್ಡ್‌ಕೋಸ್ಟ್: ಆರಂಭಿಕ ಬ್ಯಾಟರ್ ಸ್ಮೃತಿ ಮಂದನಾ (52ರನ್, 49 ಎಸೆತ, 8 ಬೌಂಡರಿ) ಬಿರುಸಿನ ಬ್ಯಾಟಿಂಗ್ ನಡುವೆಯೂ ಭಾರತ ಮಹಿಳಾ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 14 ರನ್‌ಗಳಿಂದ ಆತಿಥೇಯ ಆಸ್ಟ್ರೇಲಿಯಾ ತಂಡದ ಎದುರು ಸೋಲನುಭವಿಸಿತು. ಇದರಿಂದ ಮೂರು ಪಂದ್ಯಗಳ ಸರಣಿಯನ್ನು ಭಾರತ 0-2 ರಿಂದ ಕೈಚೆಲ್ಲಿತು. ಮೊದಲ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಇದರಿಂದ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಿಗದಿತ ಓವರ್‌ಗಳ ಎರಡೂ ಸರಣಿಗಳಲ್ಲೂ ಭಾರತ ಸೋಲು ಕಂಡಿತು.

ಕ್ಯಾರೆರಾ ಓವೆಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ಬೆತ್ ಮೂನಿ (61ರನ್, 43 ಎಸೆತ, 10 ಬೌಂಡರಿ) ಹಾಗೂ ತಾಹ್ಲಿಯಾ ಮೆಕ್‌ಗ್ರಾತ್ (44*ರನ್, 31 ಎಸೆತ, 6 ಬೌಂಡರಿ, 1 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಫಲವಾಗಿ 5 ವಿಕೆಟ್‌ಗೆ 149 ರನ್‌ಗಳಿಸಿತು. ಪ್ರತಿಯಾಗಿ ಭಾರತ ತಂಡ ಸ್ಮೃತಿ ಮಂದನಾ ಉತ್ತಮ ಆರಂಭ ನೀಡಿದರೂ 6 ವಿಕೆಟ್‌ಗೆ 135 ರನ್‌ಗಳಿಸಲಷ್ಟೇ ಶಕ್ತವಾಯಿತು.

ಆಸ್ಟ್ರೇಲಿಯಾ: 5 ವಿಕೆಟ್‌ಗೆ 149 (ಬೆತ್ ಮೂನಿ 61, ಮೆಗ್ ಲ್ಯಾನಿಂಗ್ 14, ತಾಹ್ಲಿಯಾ ಮೆಕ್‌ಗ್ರಾತ್ 44*, ರಾಜೇಶ್ವರಿ ಗಾಯಕ್ವಾಡ್ 37ಕ್ಕೆ 2, ಪೂಜಾ ವಸಾಕರ್ 24ಕ್ಕೆ 1, ದೀಪ್ತಿ ಶರ್ಮ 24ಕ್ಕೆ 1), ಭಾರತ: 6 ವಿಕೆಟ್‌ಗೆ 135 (ಸ್ಮೃತಿ ಮಂದನಾ 52, ಜೇಮಿಮಾ ರೋಡ್ರಿಗಸ್ 23, ರಿಚಾ ಘೋಷ್ 23*, ಅಶ್ಲೇಗ್ ಗಾರ್ಡನರ್ 22ಕ್ಕೆ1, ನಿಕೊಲಾ ಕ್ಯಾರಿ 42ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net