

ಮುಂಬೈ: ಟೀಮ್ ಇಂಡಿಯಾ ಪರ ಆಡಿರುವ ಮುಂಬೈ ಆಲ್ರೌಂಡರ್ ಶಿವಂ ದುಬೆ ದೀರ್ಘಕಾಲದ ಗೆಳತಿ ಅಂಜುಂ ಖಾನ್ ಅವರನ್ನು ಶುಕ್ರವಾರ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಇದನ್ನು ಅವರು ಟ್ವಿಟರ್ನಲ್ಲಿ ಚಿತ್ರ ಸಹಿತ ಪ್ರಕಟಿಸಿದ್ದಾರೆ.
‘ಪ್ರೀತಿಗಿಂತಲೂ ಹೆಚ್ಚಾಗಿರುವುದನ್ನು ನಾವು ಪ್ರೀತಿಯಿಂದ ಪ್ರೀತಿಸಿದೆವು. .. ಮತ್ತು ಈಗ ನಮ್ಮ ಎಂದೆಂದಿಗೂ ಮುಗಿಯದ ಸಂಬಂಧಕ್ಕೆ ಅಧಿಕೃತ ಆರಂಭ ದೊರೆತಿದೆ. ಜಸ್ಟ್ ಮ್ಯಾರೀಡ್.... 16-07-2021’ ಎಂದು ಶಿವಂ ದುಬೆ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
28 ವರ್ಷದ ಶಿವಂ ದುಬೆ ಭಾರತ ಪರ ಇದುವರೆಗೆ ಒಂದು ಏಕದಿನ ಪಂದ್ಯ ಮತ್ತು 13 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಈ ಮುನ್ನ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಆಟಗಾರರೂ ಆಗಿದ್ದರು. ಸದ್ಯ ಅವರು ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯರಾಗಿದ್ದಾರೆ. ಕಳೆದ ಹರಾಜಿನಲ್ಲಿ 4.40 ಕೋಟಿ ರೂ.ಗೆ ರಾಜಸ್ಥಾನ ಪಾಲಾಗಿದ್ದರು. ರಣಜಿಯಲ್ಲಿ ಅವರು ಮುಂಬೈ ತಂಡದ ಸದಸ್ಯರಾಗಿದ್ದಾರೆ.