IND W vs NZ W: ಕಡೇ ನಿರ್ಣಾಯಕ ಏಕದಿನ ಪಂದ್ಯಕ್ಕೆ ಭಾರತ- ನ್ಯೂಜಿಲ್ಯಾಂಡ್​ ಮಹಿಳಾ ತಂಡಗಳು ಸಜ್ಜು..ಎಲ್ಲಿ?ಯಾವಾಗ?

women cricket team
Published on

ನವದೆಹಲಿ: ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡ ಭಾರತ ಪ್ರವಾಸದಲ್ಲಿದ್ದು, ಈ ಅವಧಿಯಲ್ಲಿ ಭಾರತ ತಂಡದೊಂದಿಗೆ 3 ಏಕದಿನ ಪಂದ್ಯಗಳ ಸರಣಿ(IND W vs NZ W) ನಡೆಯುತ್ತಿದೆ. ಆತಿಥೇಯ ಭಾರತ ತಂಡ ಸರಣಿಯ ಮೊದಲ ಪಂದ್ಯವನ್ನು 59 ರನ್‌ಗಳಿಂದ ಗೆದ್ದುಕೊಂಡಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 76 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಸರಣಿಯ ಮೂರನೇ ಹಾಗೂ ಕೊನೆಯ ನಿರ್ಣಾಯಕ ಏಕದಿನ ಪಂದ್ಯ ಮಂಗಳವಾರ(ಅ.29) ರಂದು ನಡೆಯಲಿದೆ.

ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಅರ್ಧ ಗಂಟೆ ಮುಂಚಿತವಾಗಿ ಅಂದರೆ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ.

ಪಂದ್ಯವನ್ನು ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲಭ್ಯವಿರುತ್ತದೆ.

ಭಾರತೀಯ ಮಹಿಳಾ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಡಿ ಹೇಮಲತಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ಯಾಸ್ತಿಕಾ ಭಾಟಿಯಾ, ಉಮಾ ಛೆಟ್ರಿ, ಸಯಾಲಿ ಸತ್ಗರೆ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ತೇಜಲ್ ಹಸ್ಸಾಬ್ನಿಸ್, ಸೈಮಾ ಠಾಕೋರ್, ರಾಧಾ ಮಿಶ್ರಾ, ರಾಧಾ ಮಿಶ್ರಾ.

ನ್ಯೂಜಿಲೆಂಡ್ ಮಹಿಳಾ ತಂಡ

ಸೋಫಿ ಡಿವೈನ್ (ನಾಯಕಿ), ಸುಜಿ ಬೇಟ್ಸ್, ಈಡನ್ ಕಾರ್ಸನ್, ಲಾರೆನ್ ಡೌನ್, ಇಜ್ಜಿ ಗೇಜ್, ಮ್ಯಾಡಿ ಗ್ರೀನ್, ಬ್ರೂಕ್ ಹ್ಯಾಲಿಡೇ, ಪೊಲ್ಲಿ ಇಂಗ್ಲಿಸ್, ಫ್ರಾನ್ ಜೊನಾಸ್, ಜೆಸ್ ಕೆರ್, ಅಮೆಲಿಯಾ ಕೆರ್, ಮೊಲ್ಲಿ ಪೆನ್‌ಫೋಲ್ಡ್, ಜಾರ್ಜಿಯಾ ಪ್ಲಿಮ್ಮರ್, ಹನ್ನಾ ರೋವ್, ಲೀ ತಾಹುಹು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net