

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ (IND vs WI) ಕ್ಲೀನ್ ಸ್ವೀಪ್ ಮಾಡಿದೆ. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದು ಬೀಗಿತು. ಮೂರು ವಿಕೆಟ್‌ಗಳ ನಷ್ಟಕ್ಕೆ 121 ರನ್‌ಗಳ ಗುರಿಯನ್ನು ಬೆನ್ನತ್ತಿದ ಶುಭಮನ್ ಗಿಲ್ ಪಡೆ, 35.2 ಓವರ್‌ಗಳಲ್ಲಿ ಈ ಗುರಿಯನ್ನು ಸುಲಭವಾಗಿ ತಲುಪಿತು.
ಟೀಮ್ ಇಂಡಿಯಾದ ಪರ ಕನ್ನಡಿಗ ಕೆ.ಎಲ್. ರಾಹುಲ್ (ಅಜೇಯ 58 ರನ್) ಮತ್ತು ಸಾಯಿ ಸುದರ್ಶನ್ (39 ರನ್) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ಆರಂಭಿಕರಾದ ಯಶಸ್ವಿ ಜೈಸ್ವಾಲ್ (8) ಮತ್ತು ಶುಭಮನ್ ಗಿಲ್ (13) ತಂಡಕ್ಕೆ ರನ್‌ಗಳ ಕೊಡುಗೆ ನೀಡುವಲ್ಲಿ ವಿಫಲರಾದರು. ವೆಸ್ಟ್ ಇಂಡೀಸ್ ಬೌಲರ್‌ಗಳ ಪರ ರೋಸ್ಟನ್ ಚೇಸ್ 2 ವಿಕೆಟ್‌ಗಳನ್ನು ಪಡೆದರೆ, ಜೋಮೆಲ್ ವಾರಿಕನ್ ಒಂದು ವಿಕೆಟ್ ಪಡೆದರು.
ಈ ಪಂದ್ಯದಲ್ಲಿ ನಾಯಕ ಗಿಲ್ ಟಾಸ್ ಗೆದ್ದು ಹೆಚ್ಚು ಚಿಂತಿಸದೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಯಶಸ್ವಿ ಜೈಸ್ವಾಲ್ (175 ರನ್) ಮತ್ತು ಶುಭಮನ್ ಗಿಲ್ (ಅಜೇಯ 129) ಭರ್ಜರಿ ಶತಕಗಳನ್ನು ದಾಖಲಿಸಿದರು. ಆದರೆ, ಸಾಯಿ ಸುದರ್ಶನ್ (87) ಅದ್ಭುತ ಬ್ಯಾಟಿಂಗ್, ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 518/5ಕ್ಕೆ ಡಿಕ್ಲೇರ್ ಮಾಡಿಕೊಳ್ಳುವಂತೆ ಮಾಡಿತು.
ಇನ್ನು ಬೌಲಿಂಗ್ನಲ್ಲಿ ತಂಡದ ಪರ ಕುಲದೀಪ್ ಯಾದವ್ ಐದು ವಿಕೆಟ್‌ಗಳನ್ನು ಕಬಳಿಸಿದರೆ, ರವೀಂದ್ರ ಜಡೇಜಾ ಮೂರು ವಿಕೆಟ್‌ಗಳನ್ನು ಪಡೆದರು. ಈ ಕಾರಣ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 248 ರನ್‌ಗೆ ಆಲೌಟ್ ಆಗಿ, ಭಾರತಕ್ಕೆ 270 ರನ್‌ಗಳ ನಿರ್ಣಾಯಕ ಮೊದಲ ಇನ್ನಿಂಗ್ಸ್ ಮುನ್ನಡೆ ನೀಡಿತು. ಫಾಲೋ ಆನ್ ಆದ ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಸವಾಲಿನ ಪ್ರದರ್ಶನ ನೀಡಿತು.
ಬ್ಯಾಟರ್ ಜಾನ್ ಕ್ಯಾಂಪ್ಬೆಲ್ (115 ರನ್) ಮತ್ತು ಶಾಯ್ ಹೋಪ್ (103) ಶತಕ ಗಳಿಸಿ 390 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್ ಮುನ್ನಡೆ ಕಳೆದುಕೊಂಡಿದ್ದ ಭಾರತಕ್ಕೆ 112 ರನ್‌ಗಳ ಸಾಧಾರಣ ಗುರಿಯನ್ನು ನೀಡಲಾಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ, ಕೇವಲ ಮೂರು ವಿಕೆಟ್ ನಷ್ಟಕ್ಕೆ ಈ ಗುರಿಯನ್ನು ಸಾಧಿಸಿತು,(ಏಜೆನ್ಸೀಸ್).