ವಿಂಡೀಸ್​ ಪಡೆಗೆ ಬೆವರಿಳಿಸಿದ ನಮನ್ ಸಿಕ್ಸರ್​ ಆರ್ಭಟಕ್ಕೆ ಮಳೆ ಅಡ್ಡಿ​! ಎರಡೂ ತಂಡಕ್ಕೂ ಟ್ರೋಫಿ ಹಂಚಿಕೆ | IND vs WI T20

IND vs WI T20
ವಿಂಡೀಸ್​ ಪಡೆಗೆ ಬೆವರಿಳಿಸಿದ ನಮನ್ ಸಿಕ್ಸರ್​ ಆರ್ಭಟಕ್ಕೆ ಮಳೆ ಅಡ್ಡಿ​! ಎರಡೂ ತಂಡಕ್ಕೂ ಟ್ರೋಫಿ ಹಂಚಿಕೆ | IND vs WI T20
Published on: 

IND vs WI T20: ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್​ ನಡುವಿನ ಐದನೇ ಹಾಗೂ ನಿರ್ಣಾಯಕ ಟಿ20 ಪಂದ್ಯದ ಮೊದಲ ಇನ್ನಿಂಗ್ಸ್ ಇದೀಗ ಮುಕ್ತಾಯಗೊಂಡಿದೆ.

ಮಳೆ ಸುರಿದ ಹಿನ್ನೆಲೆ 9 ಓವರ್​ಗೆ ಪಂದ್ಯವನ್ನು ಸೀಮಿತಗೊಳಿಸಿದ ಬೆನ್ನಲ್ಲೇ ಟಾಸ್​ ಗೆದ್ದು ವಿಂಡೀಸ್​ ಪಡೆ ಬೌಲಿಂಗ್ ಆಯ್ದುಕೊಂಡಿತು. ತವರಿನ ಪಿಚ್​ನಲ್ಲಿ ಅಬ್ಬರಿಸಲು ಕಣಕ್ಕಿಳಿದ ಆರಂಭಿಕರಾದ ಅಭಿಷೇಕ್ ಶರ್ಮಾ ಬಹುಬೇಗನೇ ಪೆವಿಲಿಯನ್​ ಹಾದಿ ಹಿಡಿದರೆ, ಸಂಜು 16 ರನ್​ ಗಳಿಸಿ ಔಟ್​ ಆದರು. ಆದರೆ, ಕ್ರೀಸ್​ಗೆ ಅಂಟಿ ನಿಂತ ಇಶಾನ್​ ಕಿಶನ್​, ಕೇವಲ 10 ಎಸೆತದಲ್ಲಿ ಸ್ಫೋಟಕ 30 ರನ್ (3 ಬೌಂಡರಿ, 2 ಸಿಕ್ಸರ್​)​ ಸಿಡಿಸಿ ವಿಕೆಟ್​ ಒಪ್ಪಿಸಿದರು.

ಕಿಶನ್​ರ ಅಬ್ಬರದ ಬ್ಯಾಟಿಂಗ್​ನಿಂದ ಮೊದಲ 2ನೇ ಓವರ್​ಗೆ ತಂಡವು 40 ರನ್​ಗಳ ಗಡಿಯನ್ನು ಸುಲಭವಾಗಿ ತಲುಪಿತು. ಆ ನಂತರ ಬಂದ ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​, 22 ರನ್​ ಬಾರಿಸಿ ಔಟ್​ ಆದರೆ, ಕ್ರೀಸ್​ಗೆ ಬಂದ ಮೊದಲ ಬಾಲ್​ನಿಂದಲೇ ಸಿಕ್ಸರ್​ ಹೊಡೆದ ನಮನ್​ ಧಿರ್​, ಬ್ಯಾಕ್​ ಟು ಬ್ಯಾಕ್ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿದರು. ಈ ಸಮಯದಲ್ಲೇ ಮಳೆ ಸುರಿದ ಪರಿಣಾಮ ಪಂದ್ಯವನ್ನು ಕೊನೆಗೂ ರದ್ದುಗೊಳಿಸಲಾಯಿತು. 2-2 ಅಂತರದ ಹಿನ್ನೆಲೆ, ಇದೀಗ ಎರಡೂ ತಂಡಳಿಗೂ ಟಿ20 ಸರಣಿಯ ಟ್ರೋಫಿಯನ್ನು ಹಂಚಿಕೆ ಮಾಡಲಾಗಿದೆ.

ಈ ಹಿಂದೆಯೇ ತಿಳಿಸಿದಂತೆ, ಪಂದ್ಯಕ್ಕೆ ಯಾವುದೇ ಮೀಸಲು ದಿನವಿಲ್ಲ. ಮಳೆ ಕೊಂಚ ಬಿಡುವು ನೀಡಿದರೆ, ಬೇಗನೇ ಫೀಲ್ಡ್ ಸಿದ್ಧಪಡಿಸಿಕೊಂಡರೆ, ಕಡಿಮೆ ಓವರ್​ಗಳಲ್ಲಿ ಸರಣಿ ವಿಜೇತರನ್ನು ನಿರ್ಧರಿಸುವ ಸಾಧ್ಯತೆ ಹೆಚ್ಚಿತ್ತು. ಆದರೆ, ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್​ ಪಡೆಯ ಬೌಲರ್​ಗಳಿಗೆ ಬೆವರಿಳಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದ್ದೇ ಆದರೂ ವರುಣನು ಕೃಪೆ ತೋರದ ಕಾರಣ, ಪಂದ್ಯ ಕಡೆಗೂ ರದ್ದಾಗಿ ಎರಡೂ ತಂಡಗಳಿಗೆ ಒಂದೊಂದು ಅಂಕ ನೀಡಿ, ಟ್ರೋಫಿಯನ್ನು ನೀಡಲಾಗಿದೆ. ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net