ಅಭಿಷೇಕ್​, ಗಿಲ್​ ಸ್ಫೋಟಕ ಬ್ಯಾಟಿಂಗ್​! ಯುಎಇ ವಿರುದ್ಧದ ಸುಲಭ ಗೆಲುವು ಸಾಧಿಸಿದ ಟೀಮ್ ಇಂಡಿಯಾ | IND vs UAE

Untitled design (8)
Published on

IND vs UAE: ಇಂದು ದುಬೈನಲ್ಲಿ ನಡೆದ ಭಾರತ ಮತ್ತು ಯುಎಇ ನಡುವಿನ ಎರಡನೇ ಏಷ್ಯಾಕಪ್​ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ.

ಕೇವಲ 4.3 ಓವರ್​ಗೆ ಪಂದ್ಯ ಅಂತ್ಯ

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಯುಎಇಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಕೇವಲ 57 ರನ್​ಗೆ ಆಲ್​ಔಟ್ ಆದ ಯುಎಇ, ಸೂರ್ಯಕುಮಾರ್​ ಯಾದವ್​ಗೆ ಅತ್ಯಂತ ಸುಲಭ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭಿಕರಾದ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮ ಗೆಲುವಿನ ಇನ್ನಿಂಗ್ಸ್ ನೀಡಿದರು.

ಭಾರತ ಬ್ಯಾಟಿಂಗ್ ವಿವರ

  • ಶುಭಮನ್ ಗಿಲ್​ (30 ರನ್​, 16 ಎಸೆತ, 2 ಬೌಂಡರಿ, 3 ಸಿಕ್ಸ್​)
  • ಅಭಿಷೇಕ್ ಶರ್ಮ (20 ರನ್​, 8 ಎಸೆತ, 2 ಬೌಂಡರಿ, 1 ಸಿಕ್ಸ್​)
  • ಸೂರ್ಯಕುಮಾರ್​ ಯಾದವ್​ (7 ರನ್​, 2 ಎಸೆತ, 1 ಸಿಕ್ಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net