

IND vs PAK: ಪ್ರಸಕ್ತ ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ ಸರಣಿ ಗೆಲುವು ದಾಖಲಿಸುವ ಮೂಲಕ ಇದೀಗ ಫೈನಲ್ಗೆ ಲಗ್ಗೆಯಿಟ್ಟಿದೆ. ಈ ಮಧ್ಯೆ, ನಿನ್ನೆ ನಡೆದ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಪಾಕಿಸ್ತಾನ ಗೆದ್ದಿದ್ದು, ಫೈನಲ್ ಹಣಾಹಣಿಗೆ ಪ್ರವೇಶಿಸಿದೆ. ಈ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಮೂರನೇ ಬಾರಿಗೆ ಟೀಮ್ ಇಂಡಿಯಾವನ್ನು ಪಾಕ್ ಎದುರಿಸುತ್ತಿದೆ.
ಇದೇ ಭಾನುವಾರ (ಸೆ.28) ನಡೆಯಲಿರುವ ಅಂತಿಮ ಕಾಳಗದಲ್ಲಿ ಟೀಮ್ ಇಂಡಿಯಾ ಪಾಕ್ ಜತೆಗೆ ಸೆಣಸಲಿದ್ದು, ಮೂರನೇ ಬಾರಿಗೆ ಪಾಕಿಸ್ತಾನ ತಂಡವನ್ನು ಬಗ್ಗುಬಡಿಯಲು ಎದುರುನೋಡುತ್ತಿದೆ. ಏಷ್ಯಾಕಪ್ನ 41 ವರ್ಷಗಳ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ನಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು ಎಂಬುದು ಹುಬ್ಬೇರಿಸುವ ಸಂಗತಿ. ಇಷ್ಟಲ್ಲದೇ, ಒಂದೇ ಆವೃತ್ತಿಯಲ್ಲಿ ಮೂರು ಬಾರಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಸಹ ಇದೇ ಮೊದಲು.
1984ರಲ್ಲಿ ಏಷ್ಯಾಕಪ್ ಟೂರ್ನಿ ಪ್ರಾರಂಭವಾಯಿತು. ಮೊದಲ ಆವೃತ್ತಿಯಲ್ಲಿ ಮೂರು ತಂಡಗಳು ಭಾಗವಹಿಸಿದ್ದವು. ಆದರೆ, ಈಗ ಅದು ಎಂಟು ತಂಡಗಳನ್ನು ತಲುಪಿದೆ. ಭಾರತ ತಂಡವು ಅತಿ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿಯವರೆಗೆ, ಟೀಮ್ ಇಂಡಿಯಾ ಈ ಟ್ರೋಫಿಯನ್ನು 8 ಬಾರಿ ಗೆದ್ದು ಬೀಗಿದೆ. ಭಾರತ ಬಳಿಕ ಶ್ರೀಲಂಕಾ 6 ಬಾರಿ ಗೆದ್ದು, ಎರಡನೇ ಸ್ಥಾನದಲ್ಲಿದೆ. ಇನ್ನು ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಒಟ್ಟು 10 ಬಾರಿ ಫೈನಲ್ ಪ್ರವೇಶಿಸಿದೆ ಮತ್ತು ಎಂಟು ಬಾರಿ ಜಯ ಸಾಧಿಸಿದೆ,(ಏಜೆನ್ಸೀಸ್).
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ, ರಿಂಕು ಸಿಂಗ್
ಸಲ್ಮಾನ್ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ಶಹಫ್ಜಾಬ್, ಸಲೀಂಝಾದಾ ಫರ್ಹಾನ್, ಮೊಹಮ್ಮದ್ ಶಹಫ್ಜಾಬ್, ಮೊಹಮ್ಮದ್ ಸಲ್ಮಾನ್. ಸುಫ್ಯಾನ್ ಮುಕೀಮ್.